ದೇಶಪ್ರಮುಖ ಸುದ್ದಿಮನರಂಜನೆ

ಕೋವಿಡ್ ರಿಲೀಫ್ ನಿಧಿ ಸಂಗ್ರಹ ಅಭಿಯಾನ: 2 ಕೋಟಿ ರೂ. ದೇಣಿಗೆ ನೀಡಿದ ವಿರುಷ್ಕಾ ದಂಪತಿ

ಮುಂಬೈ,ಮೇ 7-ಕೋವಿಡ್ ವಿರುದ್ಧ ಹೋರಾಟಕ್ಕೆ ಅನೇಕ ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತವರ ಪತ್ನಿ, ನಟಿ ಅನುಷ್ಕಾ ಶರ್ಮಾ ನೆರವು ನೀಡಿದ್ದಾರೆ.

ಇವರು ಕೋವಿಡ್ ರಿಲೀಫ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ದಂಪತಿ 2 ಕೋಟಿ ರೂ. ಅನ್ನು ದೇಣಿಯಾಗಿ ನೀಡಿದ್ದಾರೆ.

ಈ ನಿಧಿ ಸಂಗ್ರಹ ಅಭಿಯಾನದ ಮೂಲಕ ಏಳು ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಣವನ್ನು ಆಕ್ಸಿಜನ್, ಲಸಿಕೆ, ಔಷಧಿ ಮುಂತಾದ ತುರ್ತು ಬಳಕೆಗೆ ಬೇಕಿರುವ ವ್ಯವಸ್ಥೆಗೆ ವಿನಿಯೋಗಿಸಲಾಗುತ್ತದೆ.

ಕೋವಿಡ್-19 ಎರಡನೇ ಅಲೆಯಿಂದ ಭಾರತ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಬೇಕಿದೆ. ಅವಶ್ಯವಿರುವವರಿಗೆ ನಾವು ಸಹಾಯ ಹಸ್ತ ಚಾಚಬೇಕಿದೆ. ಜನರ ನರಳಾಟವನ್ನು ಕಂಡು ವಿರಾಟ್ ಕೊಹ್ಲಿ ಹಾಗೂ ನನಗೆ ತೀವ್ರ ಬೇಸರ ಉಂಟಾಗಿದೆ. ನಮ್ಮ ಈ ದೇಣಿಗೆಯಿಂದ ಹಲವರಿಗೆ ಸಹಾಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಎಲ್ಲರ ಸುರಕ್ಷತೆಗಾಗಿ ನಾವು ಪ್ರಾರ್ಥನೆ ಮಾಡುತ್ತಿದ್ದೇವೆ. ನಮ್ಮ ಪ್ರಾರ್ಥನೆಗೆ ನೀವೆಲ್ಲರೂ ಜೊತೆಯಾಗಿ ಎಂದು ಅನುಷ್ಕಾ ಶರ್ಮಾ ಕೇಳಿಕೊಂಡಿದ್ದಾರೆ.

ನಮ್ಮ ದೇಶದ ಇತಿಹಾಸದಲ್ಲೇ ಅತ್ಯಂತ ಸಂಕಷ್ಟದ ಸಮಯವನ್ನು ನಾವೀಗ ಎದುರಿಸುತ್ತಿದ್ದೇವೆ. ನಾವೆಲ್ಲರೂ ಒಂದಾಗಿ ಹಲವರ ಜೀವ ಉಳಿಸಬೇಕಾಗಿದೆ. ಕಳೆದ ವರ್ಷದಿಂದಲೂ ಜನರ ನರಳಾಟ ಕಂಡು ನಮಗೆ ಆಘಾತ ಉಂಟಾಗಿದೆ. ಈಗ ಭಾರತಕ್ಕೆ ಹೆಚ್ಚಿನ ಬೆಂಬಲದ ಅವಶ್ಯಕತೆ ಇದೆ. ಅವಶ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ನಿಧಿ ಸಂಗ್ರಹ ಅಭಿಯಾನವನ್ನು ಶುರು ಮಾಡಿದ್ದೇವೆ. ನಾವೆಲ್ಲಾ ಜೊತೆಯಾಗೋಣ. ಈ ಕಷ್ಟ ಕಾಲದಿಂದ ಹೊರಗೆ ಬರೋಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: