Uncategorized

ವಿಜಯದಶಮಿ ಜಂಬೂ ಸವಾರಿ ದಿನದಂದು : ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಬಸ್ಸುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ

ಅ.11ರ ವಿಜಯದಶಮಿಯ ಜಂಬೂ ಸವಾರಿಯ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ

ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಬಸ್ಸುಗಳು ಸಂಚರಿಸುವ  ಮಾರ್ಗ :.

  • ಹುಣಸೂರು ರಸ್ತೆ ಮೂಲಕ ಮೆಟ್ರೋಪೋಲ್ ವೃತ್ತಕ್ಕೆ ಬಂದು ನಗರ ಸಾರಿಗೆ ನಿಲ್ದಾಣಕ್ಕೆ ಸಾಗುತ್ತಿದ್ದ ಬಸ್ಸುಗಳು ಹುಣಸೂರು ರಸ್ತೆ ವಾಲ್ಮೀಕಿ ಜಂಕ್ಷನ್‌ಲ್ಲಿಯೇ ಎಡತಿರುವು ಪಡೆದು ಕಾರ್ಪೋರೇಷನ್ ಗೆಸ್ಟ್ ಹೌಸ್ ಬಳಿ ಬಲಕ್ಕೆ ತಿರುಗಿ ದಾಸಪ್ಪ ವೃತ್ತ ಮಾರ್ಗವಾಗಿ ಧನ್ವಂತ್ರಿ ರಸ್ತೆ ಪ್ರವೇಶಿಸಿ ಪ್ರಯಾಣಿಕರ ನಿಲ್ದಾಣ ಮುಂದೆ ಸಾಗಿ ಗಾಯತ್ರಿ ಭವನ್ ಜಂಕ್ಷನನಲ್ಲಿ ಎಡತಿರುವು ಪಡೆದು ಜೆ.ಕೆ ಗ್ರೌಂಡ್ ಜಂಕ್ಷನ್‌ನಲ್ಲಿ ಎಡತಿರುವು- ರೈಲ್ವೆ ನಿಲ್ದಾಣ ವೃತ್ತ-ಎಡತಿರುವು-ಜೆ.ಎಲ್.ಬಿ. ರಸ್ತೆ- ದಾಸಪ್ಪ ವೃತ್ತದಲ್ಲಿ ಬಲತಿರುವು ಪಡೆದು ಮುಂದೆ ಸಾಗುವುದು.
  • ಕೆ.ಅರ್.ಎಸ್. ರಸ್ತೆ ಮೂಲಕ ಬರುವ ನಗರ ಸಾರಿಗೆ ಬಸ್ಸುಗಳು ಆಕಾಶವಾಣಿ ವೃತ್ತ-ದಾಸಪ್ಪ ವೃತ್ತ ಮಾರ್ಗವಾಗಿ ಧನ್ವಂತ್ರಿ ರಸ್ತೆ ಪ್ರವೇಶಿಸಿ ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸಿಕೊಂಡು ಗಾಯತ್ರಿ ಭವನ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಜೆ.ಕೆ ಗ್ರೌಂಡ್ ಜಂಕ್ಷನ್‌ನಲ್ಲಿ ಎಡತಿರುವು-ರೈಲ್ವೆ ನಿಲ್ದಾಣ ವೃತ್ತ-ಎಡತಿರುವು-ಜೆ.ಎಲ್.ಬಿ. ರಸ್ತೆ- ದಾಸಪ್ಪ ವೃತ್ತದಲ್ಲಿ ಬಲತಿರುವು ಪಡೆದು ಮುಂದೆ ಸಾಗುವುದು.
  • ನಗರ ಸಾರಿಗೆ ನಿಲ್ದಾಣಕ್ಕೆ ಎನ್.ಮಾಧವರಾವ್ ವೃತ್ತ ಮತ್ತು ಪಾಠಶಾಲಾ ವೃತ್ತದ ಮೂಲಕ ಬರುತ್ತಿದ್ದ ಬಸ್ಸುಗಳು ಎನ್.ಎಂ. ರಾವ್ ವೃತ್ತದಲ್ಲಿ ತ್ಯಾಗರಾಜ ರಸ್ತೆಯನ್ನು ಪ್ರವೇಶಿಸಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೀತಾವಿಲಾಸ ಜಂಕ್ಷನ್,  ರಾಮಸ್ವಾಮಿ ವೃತ್ತದ ಮೂಲಕ ಏಕಲವ್ಯ ವೃತ್ತಕ್ಕೆ ಬಂದು ಮಹಾರಾಜ ಕಾಲೇಜು ಮೈದಾನವನ್ನು ನಿಲ್ದಾಣವಾಗಿ ಸಂಚರಿಸುವುದು.
  • ನಗರ ಸಾರಿಗೆ ನಿಲ್ದಾಣಕ್ಕೆ ಆರ್.ಟಿ.ಓ. ವೃತ್ತದಿಂದ-ರಾಮಸ್ವಾಮಿ ವೃತ್ತ ಮತ್ತು ಪಾಠಶಾಲಾ ವೃತ್ತದ ಮೂಲಕ ಬರುತ್ತಿದ್ದ ಬಸ್ಸುಗಳು ಆರ್.ಟಿ.ಓ. ವೃತ್ತದಲ್ಲಿ ಎಡತಿರುವು ಪಡೆದು ನ್ಯಾಯಾಲಯದ ಬಳಿ ಬಲತಿರುವು ಪಡೆದು ಕೆ.ಆರ್. ಬುಲವರ್ಡ ರಸ್ತೆಯಲ್ಲಿ ಸಾಗಿ ಏಕಲವ್ಯ ವೃತ್ತಕ್ಕೆ ಬಂದು ಮಹಾರಾಜ ಕಾಲೇಜು ಮೈದಾನವನ್ನು ನಿಲ್ದಾಣವಾಗಿ ಉಪಯೋಗಿಸಿಕೊಂಡು ಸಂಚರಿಸುವುದು.
  • ನಗರ ಸಾರಿಗೆ ನಿಲ್ದಾಣಕ್ಕೆ ನಜರಬಾದ್ ವೃತ್ತ ಮತ್ತು ಎಂ.ಆರ್.ಸಿ. ವೃತ್ತ ಮುಖೇನವಾಗಿ ಬರುತ್ತಿದ್ದ ಬಸ್ಸುಗಳು ಟೆರಿಷಿಯನ್ ಕಾಲೇಜು ವೃತ್ತದ ಮೂಲಕ ಎಂ.ಎಂ. ರಸ್ತೆಯಲ್ಲಿ ಸಾಗಿ ಗೀತಾ ಕಾನ್ವೆಂಟ್‌ವರೆಗೆ ಬಂದು ಅಲ್ಲಿಂದ ಎಡತಿರುವು ಪಡೆದು ಪುನ: ಬಲಕ್ಕೆ ತಿರುವು ತೆಗೆದುಕೊಂಡು ಸರ್ವಿಸ್ ರಸ್ತೆಯಲ್ಲಿ ಮುಂದೆ ಸಾಗಿ ವಾಯುವಿಹಾರ ಮಾರ್ಗ ತಲುಪಿ ಸೆಂಟ್ರಲ್ ಎಕ್ಸೈಜ್ ಕಛೇರಿ ಬಳಿ ಎಡತಿರುವು ಪಡೆದು ವಿನಯಮಾರ್ಗದಲ್ಲಿ ಸಂಚರಿಸಿ ಸಂಗೀತ ಕಾರ್ನರ್ ತಲುಪಿ ಸಂಬಂಧಪಟ್ಟ ಸ್ಥಳಗಳಿಗೆ ಸಾಗುವುದು.
  • ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸರ್ಕಾರಿ ಭವನದ ಉತ್ತರ ದ್ವಾರದಲ್ಲಿ ಬಲತಿರುವು ಪಡೆದು ಸಾಗುತ್ತಿದ್ದ ಬಸ್ಸುಗಳು ಸರ್ಕಾರಿ ಭವನದ ಉತ್ತರ ದ್ವಾರದಲ್ಲಿ ಎಡತಿರುವು ಪಡೆದು ಜೆ.ಪಿ. ಫಾರ್ಚುನ್ ಬಳಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸುವುದನ್ನು ಮಾಡಿಕೊಂಡು ಕಾಳಿಕಾಂಬ ದೇವಸ್ಥಾನ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಹೈದರಾಲಿ ರಸ್ತೆ ಮೂಲಕ ಎಫ್.ಟಿ.ಎಸ್. ವೃತ್ತ ಮತ್ತು ಫೌಂಟೇನ್ ವೃತ್ತ ತಲುಪಿ ಮುಂದೆ ಸಾಗುವುದು ಎಂದು ನಗರ ಪೊಲೀಸರು ಬಸ್ಸುಗಳ ಮಾರ್ಗ ಸೂಚಿಯನ್ನು ನೀಡಿದ್ದು ಇದರಂತೆ ಬಸ್ ಗಳು ಸಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು  ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: