
ಮೈಸೂರು
ಕೋವಿಡ್ ವಾರ್ ರೂಮ್ ಗೆ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಭೇಟಿ
ಮೈಸೂರು,ಮೇ.8:- ಮೈಸೂರಿನ ಕೋವಿಡ್ ವಾರ್ ರೂಮ್ ಗೆ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಭೇಟಿ ನೀಡಿದರು.
ನಗರದ ಸಿದ್ದಾರ್ಥ ಲೇಔಟ್ ನ ನೂತನ ಜಿಲ್ಲಾಧಿಕಾರಿ ಕಟ್ಟಡದಲ್ಲಿರುವ ವಾರ್ ರೂಮ್ ಇದಾಗಿದ್ದು, ವಾರ್ ರೂಮ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು. ಮೈಸೂರಿನ ಖಾಸಗಿ, ಸರ್ಕಾರಿ ಆಸ್ಪತ್ರೆಗಳ ಬೆಡ್ ಮ್ಯಾನೇಜಿಮೆಂಟ್ ಅಧ್ಯಕ್ಷರಾಗಿರುವ ಹೆಚ್.ವಿ ರಾಜೀವ್ ಅವರು ಜಿಲ್ಲಾಡಳಿತದಿಂದ ನೇಮಕವಾದ ಬೆನ್ನಲ್ಲೇ ವಾರ್ ರೂಮ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಸಿಬ್ಬಂದಿ, ಸ್ವಯಂ ಸೇವಕರೊಂದಿಗೆ ಸಭೆ ನಡೆಸಿದರು. (ಕೆ.ಎಸ್,ಎಸ್.ಎಚ್)