ಪ್ರಮುಖ ಸುದ್ದಿಮೈಸೂರು

ಕೋವಿಡ್ ಸಂಕಷ್ಟದಲ್ಲಿ ಶಾಸಕ ಸಾ.ರಾ ಮಹೇಶ್ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್

ಮೈಸೂರು,ಮೇ.8:- ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ಶಾಸಕ ಸಾ.ರಾ ಮಹೇಶ್ ಮತ್ತು ಎಂಎಲ್ ಸಿ ಹೆಚ್.ವಿಶ್ವನಾಥ್ ಇಬ್ಬರ ನಡುವೆ ನಡೆದ ಕಿತ್ತಾಟ ,ವಾದ-ವಾಗ್ವಾದ, ಆಣೆ ಪ್ರಮಾಣ ಎಲ್ಲವೂ ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಈ ಮಧ್ಯೆ ಇದೀಗ ಕೋವಿಡ್ ಸಂಕಷ್ಟದಲ್ಲಿ ಶಾಸಕ ಸಾ.ರಾ ಮಹೇಶ್ ಮಾಡುತ್ತಿರುವ ಕಾರ್ಯವನ್ನು ಎಂಎಲ್ ಸಿ ಹೆಚ್.ವಿಶ್ವನಾಥ್ ಶ್ಲಾಘಿಸಿದ್ದಾರೆ.
ಕೆ ಆರ್ ನಗರ ತಾಲೂಕಿಗೆ 200 ಬೆಡ್‌ ಗಳ ಆಸ್ಪತ್ರೆಯ ವ್ಯವಸ್ಥೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ ಮಹೇಶ್‌ ಕಾರ್ಯಕ್ಕೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಾ ರಾ ಮಹೇಶ್ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ಹಲವರಿಗೆ ಅನುಕೂಲವಾಗುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಅವರಿಗೆ ತಾಲೂಕು ಹಾಗೂ ಜಿಲ್ಲೆಗೆ ಮತ್ತಷ್ಟು ಕೆಲಸ ಮಾಡಲು ಭಗವಂತ ಶಕ್ತಿ ಕೊಡಲಿ ಎಂದು   ಶಾಸಕ ಸಾ ರಾ ಮಹೇಶ್‌ ಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಾನು ಸಹಾ ಕೊರೊನಾ ಸೋಂಕಿತರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಸೋಂಕಿತರಿಗೆ ಬೆಡ್ ಕೊಡಿಸುವುದು ಚಿಕಿತ್ಸೆ ಕೊಡಿಸುವುದು ಮಾಡುತ್ತಿದ್ದೇನೆ ಎಂದು   ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: