ಕ್ರೀಡೆಪ್ರಮುಖ ಸುದ್ದಿ

ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ರಸಿದ್ಧ್‌ ಕೃಷ್ಣಗೆ ಕೊರೋನಾ ಸೋಂಕು

ದೇಶ(ನವದೆಹಲಿ)ಮೇ.8:- ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ರಸಿದ್ಧ್‌ ಕೃಷ್ಣಅವರಿಗೆ ಕೊರೋನಾ ದೃಢವಾಗಿದೆ. ಅವರು ಬೆಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಬಿಸಿಸಿಐ ಮೂಲವು ಶನಿವಾರ ತಿಳಿಸಿದೆ.

ಶುಕ್ರವಾರ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದ 25 ವರ್ಷದ ಕ್ರಿಕೆಟಿಗ ಪ್ರಸಿದ್ಧ್‌ ಕೃಷ್ಣ ಕೊರೋನಾ ಸೋಂಕು ಖಚಿತವಾಗಿರುವ ಕೆಕೆಆರ್ ಟೀಂನ ನಾಲ್ಕನೇ ಆಟಗಾರರೆನಿಸಿದ್ದಾರೆ. ಇದಕ್ಕೂ ಮುನ್ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಮತ್ತು ಟಿಮ್ ಸೀಫರ್ಟ್ ಅವರಿಗೆ ಕೋವಿಡ್ ಕಾಣಿಸಿಕೊಂಡಿತ್ತು.

ಬಿಸಿಸಿಐ ಮೂಲದ ಪ್ರಕಾರ, ಕೃಷ್ಣ ಮತ್ತು ವಾರಿಯರ್ ಇಬ್ಬರೂ ತರಬೇತಿ ಅವಧಿಯಲ್ಲಿ ಚಕ್ರವರ್ತಿ ಅವರಿಂದ ಸೋಂಕಿಗೆ ತುತ್ತಾಗಿದ್ದಾರೆ. ಕೃಷ್ಣ ಚಕ್ರವರ್ತಿಯ ಆಪ್ತ ಸ್ನೇಹಿತರಾಗಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: