ಮೈಸೂರು

ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆ.ವಿ.ಮಲ್ಲೇಶ್ ಗಂಭೀರ ಆರೋಪ

ಮೈಸೂರು, ಮೇ.9:- ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಗಂಭೀರ ಆರೋಪ ಮಾಡಿದ್ದಾರೆ.

ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು ಎಂದು ಕೆ.ವಿ.ಮಲ್ಲೇಶ್ ಆರೋಪಿಸಿದ್ದಾರೆ. ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಲಾಗಿದೆ? ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದ್ರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಕೊರೋನಾ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡ್ತೇನೆ ಅಂತಾ ಹೇಳ್ತೀರಾ. ಹಾಗಾದ್ರೆ ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತೆ. ಜನಪರವಾಗಿ ಚಿಂತಿಸುವ ಯಾರಾದ್ರು ಡಿಸಿಗಳು ಇಂತಹ ಕೆಲಸ ಮಾಮಾಡ್ತಾರಾ? ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ. ಆರ್.ಟಿ.ಐ ಮೂಲಕ ಮಾಹಿತಿ ಬಯಸುತ್ತೇನೆ ಎಂದಿದ್ದಾರೆ.

ಜನರಿಗೆ ಒಳ್ಳೆಯದು ಮಾಡಲು ಆಗಲ್ಲ ಅಂದ್ರೆ ಮೈಸೂರಿನಿಂದ ನಿರ್ಗಮಿಸಿ. ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡ್ರೂ ನಿಮ್ಮತ್ರ ಸೂಕ್ತ ಸ್ಪಂದನೆ ಸಿಗ್ತಾ ಇಲ್ಲ. ಪಾರಂಪರಿಕ ಕಟ್ಟಡಗಳ ಸಮಿತಿಗೆ ಜಿಲ್ಲ್ಲಾಧಿಕಾರಿಗಳೇ  ಅಧ್ಯಕ್ಷರು. ಯಾರೇ ಪಾರಂಪರಿಕ ಕಟ್ಟಡ ಪಕ್ಕ ನಿರ್ಮಾಣ ಮಾಡಬೇಕಾದರೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ. ಆದರೆ ಈಜುಕೊಳ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: