ಮೈಸೂರು

ಕೊರೊನಾ ಮಣಿಸಿದ ಒಂದೇ ಕುಟುಂಬದ 17 ಮಂದಿ

ಮೈಸೂರು, ಮೇ.9: – ಸರಗೂರು ತಾಲೂಕಿನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಒಂದೇ ಕುಟುಂಬದ 17 ಮಂದಿ ಸೋಂಕು ಗೆದ್ದು ಇತರರಿಗೆ ಸ್ಥೈರ್ಯ ತುಂಬಿದ್ದಾರೆ.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರವರ ಸಹೋದರ ಲಿಂಗರಾಜೇಗೌಡ ರವರಿಗೆ ಕಳೆದ ತಿಂಗಳು 24ರಂದು ಸೋಂಕು ಧೃಡ ಪಟ್ಟಿತ್ತು. ತದನಂತರ ಪರೀಕ್ಷಗೆ ಒಳಪಟ್ಟ ಕುಟುಂಬದ ಸದಸ್ಯರಲ್ಲಿ ಮಕ್ಕಳು ಸೇರಿದಂತೆ 17 ಸದಸ್ಯರಿಗೆ ಸೋಂಕು ಇರುವುದು ಧೃಡವಾದ ಬಳಿಕ ಸರ್ಕಾರಿ ವೈದ್ಯಾಧಿಕಾರಿ ಡಾ.ಅಲೀಂ ಪಾಷಾ ನೇತೃತ್ವದ ತಂಡ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ವೈದ್ಯರ ತಂಡ ಮನೆಯವರಿಗೆ ಧೈರ್ಯ ತುಂಬಿದೆ. ಸೋಂಕಿತ 17 ಮಂದಿಯನ್ನು ಸಹ ಅವರು ವಾಸವಿದ್ದ ಮನೆಯಲ್ಲೇ ಹೋಮ್ ಐಸೋಲೇಷನ್ ಮಾಡಿ ಬಳಿಕ ಪ್ರತಿದಿನ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಚಿಕಿತ್ಸೆ ನೀಡಲು ಆರಂಭಿಸಿದ್ದರು.

ಸದ್ಯ ಕುಟುಂಬದ 17 ಮಂದಿಯೂ ಸಹ ಆತ್ಮಸ್ಥೈರ್ಯದಿಂದ ಕೊರೊನಾ ವಿರುದ್ಧ ಹೋರಾಡಿ ಸೋಂಕನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: