ಮೈಸೂರು

ಮೈಸೂರು ಜಿಲ್ಲೆಯಲ್ಲಿಂದು 1,854 ಕೊರೊನಾ ವೈರಸ್ ಸೋಂಕು ಪತ್ತೆ

ಮೈಸೂರು,ಮೇ.9:- ಮೈಸೂರು ಜಿಲ್ಲೆಯಲ್ಲಿಂದು 1,854 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 98,747 ಕ್ಕೇರಿಕೆಯಾಗಿದೆ. ಇಂದು 2,667 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಸತತ 3ನೇ ದಿನವೂ ಕೊರೊನಾ ಪಾಸಿಟಿವ್ ಹೊಂದಿದವರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು ಇದೆ. ಮೈಸೂರಿನಲ್ಲಿ ಇದುವರೆಗೂ 81,819 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,601 ಕ್ಕೆ ಇಳಿಕೆಯಾಗಿದೆ. ಇಂದು ಸಹ ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮೈಸೂರಿನಲ್ಲಿಂದು 13 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.  ಮೈಸೂರಿನಲ್ಲಿ ಇದುವರೆಗೆ 1,327 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: