ಪ್ರಮುಖ ಸುದ್ದಿಮನರಂಜನೆ

ಪತಿ ನಿಧನದ ನಂತರ ಮೊದಲ ಬಾರಿಗೆ ನಟಿ ಮಾಲಾಶ್ರೀಯಿಂದ ಭಾವುಕ ಪತ್ರ

ರಾಜ್ಯ(ಬೆಂಗಳೂರು)ಮೇ.10:- ಪತಿ ನಿಧನದ ನೋವಿನಲ್ಲಿರುವ ನಟಿ ಮಾಲಾಶ್ರೀ ಭಾವುಕಪತ್ರವೊಂದನ್ನು ಬರೆದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿರ್ಮಾಪಕ ಕೋಟಿ ರಾಮು ನಿಧನದ ಸಂದರ್ಭದಲ್ಲಿ ನೆರವಾದವರಿಗೆ ಮಾಲಾಶ್ರೀ ಧನ್ಯವಾದ ಹೇಳಿದ್ದಾರೆ. ಕಳೆದ ಹದಿನೈದು ದಿನಗಳು ನೋವಿನ ದಿನಗಳಾಗಿದ್ದವು. ಏನು ಮಾಡಬೇಕೆಂದು ಗೊತ್ತಾಗದಂತಾಗಿತ್ತು. ರಾಮು ನಿಧನದಿಂದ ನಮ್ಮ ಹೃದಯ ಚೂರು ಚೂರಾಗಿತ್ತು ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಮಾಧ್ಯಮದವರು, ತಂತ್ರಜ್ಞರು, ಕಲಾವಿದರು, ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು ಕಷ್ಟದ ಸಮಯದಲ್ಲಿ ಜೊತೆಗೆ ನಿಂತಿದ್ದರು. ಅವರಿಗೆ ಧನ್ಯವಾದಗಳು ಎಂದು ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: