ಪ್ರಮುಖ ಸುದ್ದಿವಿದೇಶ

ಅಮೆರಿಕ: ಬರ್ತ್ ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 6 ಮಂದಿ ಸಾವು

ಕೊಲರಾಡೊ,(ಅಮೆರಿಕ),ಮೇ 10- ಬಂದೂಕುಧಾರಿಯೊಬ್ಬ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಗುಂಡು ಹಾರಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಕೊನೆಗೂ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಲರಾಡೊ ಸ್ಪ್ರಿಂಗ್ಸ್‌ ನಗರದಲ್ಲಿ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಕುಟುಂಬ, ಮಕ್ಕಳು ಮತ್ತು ಸ್ನೇಹಿತರು ಸೇರಿ ಖುಷಿಯಲ್ಲಿ ಮುಳುಗಿದ್ದರು. ಈ ವೇಳೆ ಪಾರ್ಟಿಗೆ ನುಗ್ಗಿದ್ದ ಬಂದೂಕುಧಾರಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಆರು ಮಂದಿ ಮೃತಪಟ್ಟಿದ್ದಾರೆ.

ತನ್ನ ಪ್ರೇಯಸಿ ಭಾಗಿಯಾಗಿದ್ದ ಪಾರ್ಟಿ ಮೇಲೆ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ದುಷ್ಕರ್ಮಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಸದ್ದಿನಿಂದ ಎಚ್ಚರಗೊಂಡಿದ್ದಾಗಿ ನೆರೆಮನೆಯ ನಿವಾಸಿ ಯೆನಿಫರ್‌ ರೆಯೆಸ್‌, ‘ಡೆನ್ವರ್‌ ಪೋಸ್ಟ್‌’ಗೆ ತಿಳಿಸಿದ್ದಾರೆ. ದಾಳಿಯಿಂದ ಕಂಗಾಲಾಗಿದ್ದ ಮಕ್ಕಳು ಅಳುತ್ತಿದ್ದರು. ಗಾಯಗಳಿಲ್ಲದೇ ಪಾರಾಗಿದ್ದ ಮಕ್ಕಳನ್ನು ಪೊಲೀಸರು ಈ ‘ಟ್ರೇಲರ್‌ ಮನೆ’ಯಿಂದ ಬೆಂಗಾವಲು ವಾಹನದಲ್ಲಿ ಕರೆದೊಯ್ದರು. ಅವರನ್ನು ಸಂಬಂಧಿಕರ ಮನೆಗೆ ತಲುಪಿಸಲಾಯಿತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: