ದೇಶಪ್ರಮುಖ ಸುದ್ದಿ

ಅಖಿಲೇಶ್, ಮುಲಾಯಂ, ಮಾಯಾ ಭದ್ರತೆ ಹಿಂಪಡೆದ ಯೋಗಿ ಸರ್ಕಾರ; ಬಿಜೆಪಿ ನಾಯಕರಿಗೆ ಭದ್ರತೆ ಹೆಚ್ಚಳ!

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ನೂತನ ಸರ್ಕಾರವು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.

ವಿರೋಧಪಕ್ಷಗಳ ನಾಯಕರ ಭದ್ರತೆಯನ್ನು ಹಿಂಪಡೆಯಲಾಗಿದ್ದರೆ, ಆಡಳಿತ ಪಕ್ಷದ ಹಲವು ನಾಯಕರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬಿಜೆಪಿ ಮಾಜಿ ಸಂಸದ ವಿನಯ್ ಕಟೀಯಾರ್ ಅವರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.

ಏ.22 ರಂದು ನಡೆದ ಗೃಹ ಇಲಾಖೆ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದ್ದು, ಅಂದು ರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ. ಈವರೆಗೂ 151 ವಿಐಪಿಗಳಿಗೆ ಉನ್ನತ ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಈ ಪೈಕಿ 105 ವಿಐಪಿಗಳ ಭದ್ರತೆ ಹಿಂಪಡೆಯಲಾಗಿದ್ದು, 46 ವಿಐಪಿಗಳ ಭದ್ರತಾ ಶ್ರೇಣಿಯನ್ನು ಕಡಿಮೆ ಮಾಡಲಾಗಿದೆ.

(ಎನ್.ಬಿ.ಎನ್)

Leave a Reply

comments

Related Articles

error: