ಕರ್ನಾಟಕಪ್ರಮುಖ ಸುದ್ದಿ

ಕನ್ನಡ ಸರಿಗಮಪ ಖ್ಯಾತಿಯ ಹೆಡ್ ಕಾನ್ ಸ್ಟೇಬಲ್ ಸುಬ್ರಹ್ಮಣ್ಯ ಪತ್ನಿ ಕೊರೋನಾಕ್ಕೆ ಬಲಿ

ರಾಜ್ಯ(ಬೆಂಗಳೂರು)ಮೇ.11:-  ಕನ್ನಡ ಸರಿಗಮಪ ಖ್ಯಾತಿಯ ಹೆಡ್ ಕಾನ್ ಸ್ಟೇಬಲ್ ಸುಬ್ರಹ್ಮಣ್ಯ ಅವರ ಪತ್ನಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.

ಪೊಲೀಸ್ ಹೆಡ್ ಕಾನ್ಸಟೇಬಲ್ ಸುಬ್ರಹ್ಮಣ್ಯ ಅವರು ಸರಿಗಮಪ ಶೋನಿಂದ ಸಾಕಷ್ಟು  ಹೆಸರು ಮಾಡಿದ್ದರು. ಸುಬ್ರಹ್ಮಣ್ಯ ಅವರ ಪತ್ನಿ ಜ್ಯೋತಿ ಅವರಿಗೆ ಕಳೆದ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು.  ಕಳೆದ ಎರಡು ದಿನಗಳ ಹಿಂದೆ ಜ್ಯೋತಿ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಓಡಾಡಿದರೂ ಕೂಡ ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದಾರೆ.

ನಂತರ ಹೊಸಕೋಟೆಯ ಸಿಲಿಕಾನ್ ಸಿಟಿಯ ಆಸ್ಪತ್ರೆಗೆ ಜ್ಯೋತಿಯವರನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸುಬ್ರಹ್ಮಣ್ಯ ಅವರ ಪತ್ನಿ   ಸಾವನ್ನಪ್ಪಿದ್ದಾರೆ.

ಸುಬ್ರಹ್ಮಣ್ಯ ಅವರು ಕೋಲಾರ ಮೂಲದವರಾಗಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: