ದೇಶಪ್ರಮುಖ ಸುದ್ದಿವಿದೇಶ

ಅಪಘಾನಿಸ್ತಾನ್ ದಲ್ಲಿ ಭಾರತದ ರಾಜತಾಂತ್ರಿಕ ವಿನೇಶ್ ಕಲ್ರಾ   ನಿಧನ 

ದೇಶ(ನವದೆಹಲಿ)ಮೇ.11:- ಭಾರತದ ಹಿರಿಯ ರಾಜತಾಂತ್ರಿಕ ವಿನೇಶ್ ಕಲ್ರಾ ಅಫ್ಘಾನಿಸ್ತಾನದಲ್ಲಿ ನಿಧನರಾದರು. ಮಜಾರೆ ಷರೀಫ್‌ ನಲ್ಲಿ ಕೌನ್ಸಿಲ್ ಜನರಲ್ ಆಫ್ ಇಂಡಿಯಾ ಆಗಿ ನೇಮಕಗೊಂಡಿದ್ದ ಕಲ್ರಾ, ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಕಾಬೂಲ್‌ ನಲ್ಲಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲಾಗಿದ್ದರು.

ವಿನೇಶ್ ಕಲ್ರಾ ಅವರ ನಿಧನದ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕಂಬನಿ ಮಿಡಿದಿದ್ದಾರೆ.  “ಅವರಂತಹ ಸಮರ್ಪಿತ ಸಹೋದ್ಯೋಗಿಯನ್ನು ಕಳೆದುಕೊಳ್ಳುವುದು ತುಂಬಾ ದುಃಖದ ವಿಷಯವಾಗಿದೆ, ಅವರು ಅನುಪಸ್ಥಿತಿ ಅನುಭವಕ್ಕೆ ಬರಲಿದೆ.   ಎಂದು ಹೇಳಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶೃಂಗಲಾ   ”  ಮುಂದೆ ಹೋಗಿ ಸವಾಲಿನ ನಿಯೋಜನೆಯನ್ನು ಸ್ವೀಕರಿಸುತ್ತಿದ್ದ  ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ” ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: