ಸುದ್ದಿ ಸಂಕ್ಷಿಪ್ತ

ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜು ವಾರ್ಷಿಕೋತ್ಸವ

ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಏ. 27 ಮತ್ತು 28 ರಂದು ನಡೆಯಲಿದೆ.ಕಾಲೇಜಿನ ಆವರಣದಲ್ಲಿ ಏ. 24, 25 ಬೆಳಿಗ್ಗೆ 10.00 ರಿಂದ  ಕ್ರೀಡಾ ಚಟುವಟಿಕೆಗಳು ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಏ.26ರಂದು ಬೆಳಿಗ್ಗೆ 10.30ರಂದು ಸಾಂಪ್ರದಾಯಿಕ ಉಡುಗೆ-ತೊಡುಗೆ (ಎಥ್ನಿಕ್ ಡೇ), ಆಟೋ ಎಕ್ಸ್-ಪೋ ಹಾಗೂ ಬೈಕ್‍ಸ್ಟಂಟ್ಸ್ ನಡೆಯಲಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಧನ ಸಹಾಯ,  ಫ್ಯಾಷನ್ ಷೋ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್ ಛೇರ್ಮನ್ ಎಲ್ ಅರುಣ್ ಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಜಿಪಿ ವಿಫುಲ್ ಕುಮಾರ್ ,ಚಿತ್ರನಟ ಯೋಗೀಶ್,ನಟಿ ಶ್ರಾವ್ಯರಾವ್ ಪಾಲ್ಗೊಳ್ಳಲಿದ್ದಾರೆ. ಏ.27ರಂದು ಸಂಜೆ 5.30ರಿಂದ ಕನ್ನಡದ ಪ್ರಸಿದ್ದ ರ್ಯಾಪ್ ಸಂಗೀತಗಾರ ಚಂದನ್‍ಶೆಟ್ಟಿ ಮತ್ತು ತಂಡದವರಿಂದ “ ಸಂಗೀತ ರಸಸಂಜೆ ನಡೆಯಲಿದೆ.

Leave a Reply

comments

Related Articles

error: