ಮನರಂಜನೆಮೈಸೂರು

ಡಿ ಬಾಸ್ ದರ್ಶನ್ ತೋಟಕ್ಕೆ ಬಂದಿದೆ ಗಣಪತಿ ಸಚ್ಚಿದಾನಂದ ಆಶ್ರಮದ ಗಿಳಿ

ಮೈಸೂರು,ಮೇ.11:- ಪ್ರಾಣಿಪಕ್ಷಿಗಳ ಪ್ರೀತಿಗೆ ಹೆಸುರುವಾಸಿಯಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವು ಸಾಕುತ್ತಿರುವ ಪಕ್ಷಿಗಳ ಲೀಸ್ಟಿಗೆ ಹೊಸ ಸದಸ್ಯನನ್ನು ಸೇರಿಸಿಕೊಂಡಿದ್ದಾರೆ.
ನಿನ್ನೆ ಸೋಮವಾರ (ಮೇ 10) ದಂದು ನಟ ದರ್ಶನ್ ಮೈಸೂರಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು.

ಗಣಪತಿ ಸಚ್ಚಿದಾನಂದ ಶ್ರೀ ಗಳ ಬಳಿ ಆಶೀರ್ವಾದ ಪಡೆದುಕೊಂಡ ನಂತರ ಆಶ್ರಮದ ಆವರಣದಲ್ಲಿದ್ದ “ಶುಕವನ”ಕ್ಕೆ ಭೇಟಿ ನೀಡಿ ಅಲ್ಲಿದ್ದ ಪಕ್ಷಿಗಳನ್ನು ವೀಕ್ಷಿಸಿದ ಅವರು ಅಲ್ಲಿದ್ದ ರೆಡ್ ಹೆಡೆಡ್ ಅಮೇಜಾ಼ನ್ ಎಂಬ ಜಾತಿಗೆ ಸೇರಿದ ಗಿಳಿಯೊಂದನ್ನು ಇಷ್ಟಪಟ್ಟು, ಶ್ರೀಗಳ ಬಳಿ ಆ ಪಕ್ಷಿಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ಇದಕ್ಕೊಪ್ಪಿದ ಶ್ರೀಗಳು ನಟ ದರ್ಶನ್ ಗೆ ಪಕ್ಷಿಯನ್ನು ಹಸ್ತಾಂತರಿಸಿದ್ದಾರೆ.

ಈ ಮೂಲಕ ಡಿ ಬಾಸ್ ಅವರ ತಂಡಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: