ಕರ್ನಾಟಕಪ್ರಮುಖ ಸುದ್ದಿ

ಕೋವಿಡ್-19 ರೋಗಿಗಳಿಗೆ ಸಹಾಯ ಮಾಡಲು ಆಕ್ಸಿಬಸ್ ಸೇವೆಗೆ ಚಾಲನೆ ನೀಡಿದ ಸಿಎಂ

ರಾಜ್ಯ(ಬೆಂಗಳೂರು)ಮೇ.12:- ಗಂಭೀರ ಸ್ವರೂಪದ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ, ‘ಅನಗತ್ಯವಾಗಿ’ ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಉಳಿದಿರುವ ಕೋವಿಡ್ ರೋಗಿಗಳು ಮನೆಗೆ ತೆರಳಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

332 ರೋಗಿಗಳು 30 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಅವಶ್ಯಕತೆ ಏನು? ಆಸ್ಪತ್ರೆಯಲ್ಲಿ 503 ರೋಗಿಗಳು 20 ದಿನಗಳಿಂದ ಇದ್ದಾರೆ. ಈ ರೀತಿ ಅನಗತ್ಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿರುವ ಜನರು ಮನೆಗೆ ಮರಳಬೇಕು  ಎಂದು ಅವರು ಹೇಳಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಕೋವಿಡ್-19 ರೋಗಿಗಳಿಗೆ ಸಹಾಯ ಮಾಡಲು ಮುಖ್ಯಮಂತ್ರಿಗಳು ಆಕ್ಸಿಬಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ಪ್ರತಿ ತಾತ್ಕಾಲಿಕ ಆಕ್ಸಿಬಸ್ 8 ರೋಗಿಗಳಿಗೆ ನೆರವಾಗಲಿದೆ. ಅಂತಹ 20 ಬಸ್ ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಇರಿಸಲಾಗುವುದು ಅಲ್ಲದೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಇರಿಸಲಾಗುವುದು. ಬೆಂಗಳೂರಿನ ಕೋವಿಡ್ ವಾರ್ ರೂಮ್ ಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೋವಿಡ್ ರೋಗಿಗಳ ಬಗ್ಗೆ ಮಾಹಿತಿ, ಆಸ್ಪತ್ರೆಗಳಲ್ಲಿನ ಬೆಡ್ ಗಳ ಸ್ಥಿತಿ, ಆಮ್ಲಜನಕದ ಲಭ್ಯತೆ ಮತ್ತು ಸಾಂಕ್ರಾಮಿಕ ರೋಗಕ್ಕೆ ಅಗತ್ಯವಾದ ಇತರ ಔಷಧಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೋವಿಡ್ ವಾರ್ ರೂಮ್ಮನೆಯಲ್ಲಿ ಚಿಕಿತ್ಸೆ ಪಡೆಯಬಹುದಾದ ರೋಗಿಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ, ಆದರೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಕಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

Leave a Reply

comments

Related Articles

error: