ದೇಶಪ್ರಮುಖ ಸುದ್ದಿ

ಕೊರೋನಾ ರಿಲೀಫ್ ಟಾಸ್ಕ್ ಫೋರ್ಸ್ ರಚಿಸಿದ ಸೋನಿಯಾ ಗಾಂಧಿ : ನೇತೃತ್ವ ವಹಿಸಲಿರುವ ಗುಲಾಮ್ ನಬಿ ಆಜಾದ್

ದೇಶ(ನವದೆಹಲಿ)ಮೇ.12:- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೊರೋನಾ ರಿಲೀಫ್ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ಗುಲಾಮ್ ನಬಿ ಆಜಾದ್ ಅವರಿಗೆ ಕಾರ್ಯಪಡೆ ನೇತೃತ್ವ ನೀಡಲಾಗಿದೆ.
ಈ ಸಮಿತಿಯಲ್ಲಿ ಪ್ರಿಯಾಂಕಾ ಗಾಂಧಿ, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಪವನ್ ಕುಮಾರ್ ಬನ್ಸಾಲ್, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ರಂದೀಪ್ ಸುರ್ಜೆವಾಲಾ, ಅಜಯ್ ಕುಮಾರ್, ಪವನ್ ಖೇರಾ, ಗುರುದೀಪ್ ಸಿಂಗ್ ಸುಪಾಲ್ ಹೆಸರುಗಳಿವೆ.
ಈ ಸಮಿತಿಯು ದೇಶಾದ್ಯಂತ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪರಿಹಾರ ಕಾರ್ಯಗಳನ್ನು ಸಂಘಟಿಸಲು ಕೆಲಸ ಮಾಡುತ್ತದೆ.
ದೇಶವು ಕೊರೋನಾದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರವು ಸಮಯಕ್ಕೆ ಸರಿಯಾಗಿ ಸಿದ್ಧತೆ ನಡೆಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಕೊರೋನಾ ಸಾಂಕ್ರಾಮಿಕ ರೋಗದ ಗಂಭೀರ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಷ್ಟ್ರೀಯ ಇಚ್ಛೆಯನ್ನು ಪ್ರದರ್ಶಿಸಲು ಮತ್ತು ಪರಿಹರಿಸಲು ಸರ್ವಪಕ್ಷ ಸಭೆ ಕರೆಯಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: