ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಿ.ಜೆ.ವಾಟ್ಲಿಂಗ್

ದೇಶ(ನವದೆಹಲಿ).ಮೇ.12:-  ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಂಗ್ಲೆಂಡ್ ನಲ್ಲಿ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದೆ.  ಏತನ್ಮಧ್ಯೆ  ಕಿವೀಸ್ ನ ವಿಕೆಟ್ ಕೀಪರ್ ಬ್ಯಾಟ್ಸಮನ್ ಬಿಜೆ ವಾಟ್ಲಿಂಗ್ ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ನ್ಯೂಜಿಲ್ಯಾಂಡ್ ಕಂಡ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ – ಬ್ಯಾಟ್ಸಮನ್ ಗಳಲ್ಲಿ ಒಬ್ಬರಾದ ವಾಟ್ಲಿಂಗ್ ಕಿವೀಸ್ ಪರ 73 ಟೆಸ್ಟ್ ಪಂದ್ಯಗಳು, 28 ಏಕದಿನ ಪಂದ್ಯ ಮತ್ತು ಐದು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಕೇನ್ ವಿಲಿಯಮ್ಸನ್ ನಾಯಕತ್ವದ ತಂಡದಲ್ಲಿ ಬಿಜೆ ವಾಟ್ಲಿಂಗ್ ಪ್ರಮುಖ ಆಟಗಾರನಾಗಿದ್ದರು. 73 ಟೆಸ್ಟ್ ಪಂದ್ಯಗಳಲ್ಲಿ ಎಂಟು ಶತಕ ಸೇರಿದಂತೆ 3773 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಕೇವಲ 9ನೇ ವಿಕೆಟ್ ಕೀಪರ್ ಎಂಬ ಕೀರ್ತಿ ವಾಟ್ಲಿಂಗ್ ಅವರದ್ದು.ಕೆಳ ಕ್ರಮಾಂಕದಲ್ಲಿ ನಂಬಿಕಸ್ಥ ಬ್ಯಾಟ್ಸಮನ್ ಆಗಿದ್ದ ವಾಟ್ಲಿಂಗ್, ಎರಡು ಬಾರಿ 350 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಬ್ರೆಂಡನ್ ಮೆಕಲಮ್ ಮತ್ತು ಕೇನ್ ವಿಲಿಯಮ್ಸನ್ ಜೊತೆ ಈ ಜೊತೆಯಾಟವಾಡಿದ್ದರು. ವಿಕೆಟ್ ಕೀಪಿಂಗ್ ನಲ್ಲೂ ಕಮಾಲ್ ಮಾಡುತ್ತಿದ್ದ ವಾಟ್ಲಿಂಗ್ 259 ಕ್ಯಾಚ್ ಪಡೆದಿದ್ದಾರೆ. (ಏಜೆನ್ಸೀಸ್, ಎಸ್.ಎಚ್)

Leave a Reply

comments

Related Articles

error: