ಮೈಸೂರು

ಡಿಜಿಟಲ್ ಇಂಡಿಯಾ ಓಟಕ್ಕೆ ಚಾಲನೆ : ಪ್ರಶಸ್ತಿ ವಿತರಣೆ

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಹಾಗೂ ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾನಿಲಯ ವಾರ್ಷಿಕ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಹಬ್ಬ ಜೇಸಿಯಾನದ ಅಂಗವಾಗಿ ಆಯೋಜಿಸಿದ್ದ  ಡಿಜಿಟಲ್ ಇಂಡಿಯಾ ಓಟಕ್ಕೆ ಅರಣ್ಯಾನಿ ಚಿತ್ರ ತಂಡ ಚಾಲನೆ ನೀಡಿತು
ಪುರುಷರ ವಿಭಾಗದಲ್ಲಿ  7.2 ಕೀಮಿ ಓಟದ ಸ್ಪರ್ಧೆಯನ್ನು  ನಡೆಸಲಾಯಿತು. ಪುರುಷರ ವಿಭಾಗದಲ್ಲಿ ಚೇತನ್ ಪ್ರಥಮ, ಪ್ರಶಾಂತ್ ಕುಮಾರ್ ದ್ವೀತಿಯ ಹಾಗೂ ಪ್ರಕಾಶ್ ತೃತೀಯ ಬಹುಮಾನ ಪಡೆದುಕೊಂಡರು.
ಯುವತಿಯರ ವಿಭಾಗದಲ್ಲಿ 5 ಕಿ.ಮೀ ಮ್ಯಾರಥಾನ್  ನಡೆಸಲಾಯಿತು. ಮಹಿಳಾ ವಿಭಾಗದಲ್ಲಿ ಸುಪ್ರೀತ್ ಪ್ರಥಮ, ಪ್ರಣಿತ್ ದ್ವೀತಿಯ ಹಾಗೂ ಎಂ ಅನಿತಾ ತೃತೀಯ ಬಹುಮಾನ ಪಡೆದುಕೊಂಡರು.
ಮ್ಯಾರಥಾನ್‍ನಲ್ಲಿ ಪ್ರಥಮ ಬಹುಮಾನ 8500 ಮೌಲ್ಯದ ಉಡುಗೊರೆ, ದ್ವೀತಿಯ ಬಹುಮಾನ 2000 ಹಾಗೂ ತೃತೀಯ ಬಹುಮಾನ 1000 ರೂ. ನಗದಿನೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: