ಮೈಸೂರು

ಚಾಮುಂಡೇಶ್ವರಿಕ್ಷೇತ್ರದಲ್ಲಿ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮಿತ್ರ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಮೇ.12:- ಮೈಸೂರು ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್-19 ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿದ್ದು, ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮೈಸೂರು ತಾಲೂಕಿನಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಒಟ್ಟು 15 ಕೋವಿಡ್ ಮಿತ್ರ ಕೇಂದ್ರವನ್ನು ತೆರೆಯಲಾಗಿದೆ. ಈ ಪೈಕಿ ಚಾಮುಂಡೇಶ್ವರಿ ವಿಧಾನಸಭಾಕ್ಷೇತ್ರದಲ್ಲಿ ಒಟ್ಟು 11 ಕೋವಿಡ್ ಮಿತ್ರ ಕೇಂದ್ರಗಳನ್ನು ತೆರೆಯಲಾಗಿದ್ದು, .ಪ್ರತಿ ನಿತ್ಯ ಬೆಳಿಗ್ಗೆ 10  ರಿಂದ 6  ರವರೆಗೆಕಾರ್ಯನಿರ್ವಹಿಸಲಿವೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಅವರು ಇಂದು ತಹಶೀಲ್ದಾರ್, ತಾಲೂಕು ಆರೋಗ್ಯಅಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿಗಳೊಡನೆ ಕೋವಿಡ್-19ರ ನಿಯಂತ್ರಣ ಕುರಿತು ಚರ್ಚಿಸಿ ಪ್ರತಿ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈನ್ ಮಾಡುವಂತೆ ಸೂಚಿಸಿದರು.ಕೋವಿಡ್‍ಕುರಿತುಜನರಲ್ಲಿಅರಿವು ಮೂಡಿಸುವಂತೆ ಸೂಚಿಸಿದರು.

ಕೋವಿಡ್ ಮಿತ್ರ ಕೇಂದ್ರಗಳ ಮುಖ್ಯಉದ್ದೇಶ ಪ್ರಸ್ತುತಕೋವಿಡ್ ವೈರಾಣುರೂಪಾಂತರಗೊಂಡಿದ್ದು, ಕೋವಿಡ್-19 ಪರೀಕ್ಷೆಯ ಫಲಿತಾಂಶದಲ್ಲಿ ಅರ್ಧದಷ್ಟು ಫಲಿತಾಂಶವು ನಿಖರವಾಗಿರುವುದಿಲ್ಲ.ಉದಾಹರಣೆಗೆ ಹಲವು ತಾಲೂಕಿನಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದ ವ್ಯಕ್ತಿಗಳಿಗೆ ಕೋವಿಡ್ ಪಾಸಿಟಿವ್ ಆಗಿದ್ದರೂ ಸಹ ನೆಗೆಟಿವ್ ವರದಿ ಬಂದಿದ್ದು, ಇದರಿಂದಾಗಿ ಆ ವ್ಯಕ್ತಿಗಳು ಯಾವುದೇ  ಚಿಕಿತ್ಸೆ ಪಡೆಯದೇ, ಮನೆಯಲ್ಲಿಯೇ ಇದ್ದು ಮೃತಪಟ್ಟಿರುತ್ತಾರೆ. ಯಾವ ವ್ಯಕ್ತಿಗೆ ಕೋವಿಡ್ ಸೋಂಕಿನ ಲಕ್ಷಣಗಳಿದೆಯೋ, ಅಥವಾ ಯಾವುದೇ ರೋಗ ಲಕ್ಷಣಗಳಿದ್ದಲ್ಲಿ ಅಂತಹ ವ್ಯಕ್ತಿಗಳಿಗೆ ತಕ್ಷಣವೇ ಚಿಕಿತ್ಸೆಒದಗಿಸುವುದಾಗಿದೆ.

ಚಾಮುಂಡೇಶ್ವರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಈ ಕೆಳಕಂಡ 11 ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮಿತ್ರವನ್ನು ಪ್ರಾರಂಭಿಸಲಾಗಿದೆ.

ಪ್ರಾಥಮಿಕ ಆರೋಗ್ಯಕೇಂದ್ರ ಹಂಚ್ಯಾ. ಪ್ರಾಥಮಿಕಆರೋಗ್ಯಕೇಂದ್ರ ನಾಗನಹಳ್ಳಿ, ಪ್ರಾಥಮಿಕಆರೋಗ್ಯಕೇಂದ್ರ ಕಡಕೊಳ, ಪ್ರಾಥಮಿಕ ಆರೋಗ್ಯ ಕೇಂದ್ರ ದೂರ, ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಬೂರು, ಸಮುದಾಯ ಆರೋಗ್ಯ ಕೇಂದ್ರ ಜಯಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಬೀರಿಹುಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇಲವಾಲ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಗರಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮದೂರು ಕಲ್ಲಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಸಾಲುಂಡಿ

ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಕುವೆಂಪುನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಟಿ.ಕೆ.ಲೇಔಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಮಿತ್ರ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡುಬಂದಂತಹ ವ್ಯಕ್ತಿಗಳು ಹಾಗೂ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ ಯಾವುದೇ ವ್ಯಕ್ತಿಗಳು ಕೂಡಲೇ ಹತ್ತಿರದ ಕೋವಿಡ್ ಮಿತ್ರಕೇಂದ್ರಕ್ಕೆ ಭೇಟಿ ನೀಡಬೇಕು.

ಕೋವಿಡ್ ಮಿತ್ರಕೇಂದ್ರಕ್ಕೆ ಭೇಟಿ ನೀಡಿದ ರೋಗಿಗಳನ್ನು ಅಲ್ಲಿನ ವೈದ್ಯರು ಪರೀಕ್ಷಿಸಿ, ಅವರಿಗೆ ಕೋವಿಡ್-19 ಸೋಂಕಿನ ಸೌಮ್ಯ  ಲಕ್ಷಣಗಳಿದ್ದಲ್ಲಿ ಅವರಿಗೆ ಔಷಧಿಯನ್ನು ನೀಡಿ, ಹೋಂ ಐಸೋಲೇಶನ್‍ ಕುರಿತು ಮಾಹಿತಿ ನೀಡಲಾಗುವುದು.  ಕೋವಿಡ್-19 ರ ಹೆಚ್ಚಿನ    ಲಕ್ಷಣಗಳಿದ್ದಲ್ಲಿ ಅವರನ್ನುಕೋವಿಡ್‍ ಕೇರ್ ಸೆಂಟರ್‍ ಗೆ ಕಳುಹಿಸಲಾಗುವುದು. ಒಂದು ವೇಳೆ ಸೋಂಕಿನ ಲಕ್ಷಣಗಳು ತೀವ್ರವಾಗಿದ್ದರೆ  ಅಂತಹ ವ್ಯಕ್ತಿಗಳನ್ನು ಕೂಡಲೇ ಕೋವಿಡ್-19 ಚಿಕಿತ್ಸೆ ನೀಡಲಾಗುತ್ತಿರುವ ಆಸ್ಪತ್ರೆಗೆ ದಾಖಲಿಸಲಾಗುವುದು.

ಆದ್ದರಿಂದ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದ ವ್ಯಕ್ತಿಗಳು ಭಯಪಡದೇ ಕೂಡಲೇ ಕೋವಿಡ್ ಮಿತ್ರ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು. ಕೋವಿಡ್-19 ರ ರೋಗ ಲಕ್ಷಣಗಳು ಕಂಡಬಂದಂತಹ ವ್ಯಕ್ತಿಗಳು ಮೊದಲ ಐದು ದಿನಗಳು   ಪಂಚ ಸೂತ್ರಗಳನ್ನು ಅನುಸರಿಸಬೇಕು. ಮುಖಗವಸು ಧರಿಸುವುದು, ಪ್ರತ್ಯೇಕ ವಾಸವಿರುವುದು. ಕೋವಿಡ್ ಮಿತ್ರಗೆ ಭೇಟಿ ನೀಡಿ ಸೂಕ್ತ ಔಷಧಿಪಡೆದುಕೊಳ್ಳುವುದು ,ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು. ಪ್ರೋನಿಂಗ್ (ಬೋರಲು ಮಲಗುವುದು), ಹಬೆ ತೆಗೆದುಕೊಳ್ಳುವುದು ಮಾಡುವಂತೆ ಸಲಹೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: