ಮೈಸೂರು

ಕೊರೋನಾ ಮುಕ್ತವಾಗಿಸಲು ಕೈ ಜೋಡಿಸೋಣ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್ ವಿ ರಾಜೀವ್

ಮೈಸೂರು,ಮೇ.12:- ವಿನೋಬಾ ರಸ್ತೆಯಲ್ಲಿರುವ ಶ್ರೀ ನಂಜರಾಜ ಬಹದ್ದೂರ್ ಛತ್ರದಲ್ಲಿ ಇರುವಂತಹ ನಿರಾಶ್ರಿತರಿಗೆ ಮೈಸೂರು ಯುವ ಬಳಗದ ವತಿಯಿಂದ ಆಹಾರ ಸ್ಯಾನಿಟೈಜರ್ ಮಾಸ್ಕ್ ಹಾಗೂ ನೀರಿನ ಬಾಟಲು ನೀಡಲಾಯಿತು.
ನಿರಾಶ್ರಿತರಿಗೆ ಆಹಾರ ನೀಡುವ ಮೂಲಕ ಚಾಲನೆ ನೀಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್ ವಿ ರಾಜೀವ್ ಕೊರೋನಾ ಮುಕ್ತವಾಗಿಸಲು ಕೈ ಜೋಡಿಸೋಣ. ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ಬೇರೆ ಬೇರೆ ರೀತಿಯಲ್ಲಿ ಸಂಕಷ್ಟ ತೊಂದರೆ ಆಗಿರೋದು ನಿಜ. ಆದರೆ ಜನರ ಆರೋಗ್ಯದ ದೃಷ್ಟಿಯಲ್ಲಿ ಸರ್ಕಾರ ಲಾಕ್ ಡೌನ್ ಮಾಡದೇ ಬೇರೆ ಉಪಾಯವೇ ಇಲ್ಲ .ನಮ್ಮ ಜೀವ ಉಳಿದರೆ ನಮ್ಮ ಮುಂದಿನ ಬದುಕು ಸಾಗಿಸಬಹುದು .ಎಲ್ಲರೂ ಮುಂಜಾಗ್ರತೆ ಕ್ರಮ ಪಾಲಿಸಿ .ಕೋವಿಡ್ ಲಸಿಕೆ ಪಡೆದುಕೊಂಡು ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿ ಗೆಲ್ಲಬೇಕು .ನಮ್ಮ ದೇಶ ಕೊರೋನಾ ಮುಕ್ತವಾಗಲು ಎಲ್ಲರೂ ಕೈಜೋಡಿಸೋಣ .ನಿಮ್ಮ ಜೊತೆ ನಾವಿದ್ದೇವೆ ಲಾಕ್ ಡೌನ್ ಮುಗಿಯೋವರೆಗೂ ದಯಮಾಡಿ ನೀವೆಲ್ಲರೂ ಈ ನಿರಾಶ್ರಿತ ಕೇಂದ್ರದಲ್ಲಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಸ್ವಚ್ಛವಾಗಿ ಅಧಿಕಾರಿಗಳ ಜೊತೆ ಆತ್ಮೀಯವಾಗಿ ನಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಜಂಗಲ್ ಲಾಡ್ಜ್ ಅಧ್ಯಕ್ಷರಾದ ಅಪ್ಪಣ್ಣ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ ಎನ್ ನವೀನ್ ಕುಮಾರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಆರೋಗ್ಯ ಪರಿವೀಕ್ಷಕರು ರಾಜೇಶ್ವರಿಬಾಯಿ
ನವೀನ್ ,ಕಾಂತಿಲಾಲ್ ಜೈನ್  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: