ಮೈಸೂರು

ನಿರ್ದೇಶಕ.ದಿ.ಪುಟ್ಟಣ್ಣ ಕಣಗಾಲ್ ಮನೆಯಲ್ಲಿ ಕಳ್ಳತನ

ಖ್ಯಾತ ನಿರ್ದೇಶಕ ದಿ.ಪುಟ್ಟಣ ಕಣಗಾಲ್ ಅವರ ಮನೆಗೆ ನುಗ್ಗಿದ ಕಳ್ಳರು ಅಮೂಲ್ಯ ಗ್ರಂಥಗಳನ್ನು ಹೊತ್ತೊಯ್ದ ಘಟನೆ ನಡೆದಿದೆ.

ಪಿರಿಯಾಪಟ್ಟಣ ತಾಲೂಕು ಕಣಗಾಲ್ ಗ್ರಾಮದ ಮನೆಯಲ್ಲಿರುವ ದಿ.ಪುಟ್ಟಣ್ಣ ಕಣಗಾಲ್ ಅವರ ಮನೆಗೆ ನುಗ್ಗಿದ ಕಳ್ಳರು ತಾಮ್ರದ ಪಾತ್ರೆ ಸೇರಿದಂತೆ ಅಮೂಲ್ಯ ಗ್ರಂಥಗಳನ್ನು ಹೊತ್ತೊಯ್ದಿದ್ದಾರೆ. ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಯಾರು ಗ್ರಂಥಗಳನ್ನು ಹೊತ್ತೊಯ್ದಿರಬಹುದೆನ್ನುವ ಕುರಿತು ತಿಳಿದುಬಂದಿಲ್ಲ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: