ಕರ್ನಾಟಕಪ್ರಮುಖ ಸುದ್ದಿ

ಜುಲೈ 7 ಮತ್ತು 8 ರಂದು ನಿಗದಿಯಾಗಿದ್ದ ಸಿಇಟಿ ಪರೀಕ್ಷೆ ಆಗಸ್ಟ್ ಗೆ ಮುಂದೂಡಿಕೆ

ರಾಜ್ಯ( ಬೆಂಗಳೂರು)ಮೇ.13;- ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಜುಲೈ 7 ಮತ್ತು 8 ರಂದು ನಿಗದಿಯಾಗಿದ್ದ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಆಗಸ್ಟ್ ಗೆ ಮುಂದೂಡಲಾಗಿದೆ.

ಜುಲೈ 7 ಹಾಗೂ ಜುಲೈ 8 ರಂದು ನಿಗದಿಪಡಿಸಲಾಗಿದ್ದ 2021ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಮತ್ತು ಜುಲೈ 9ರಂದು ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ತಿಳಿಸಿದೆ.

ಪ್ರಸ್ತುತ ಸಿಇಟಿ ಅನ್ನು ಆಗಸ್ಟ್ 28 ಮತ್ತು ಆಗಸ್ಟ್ 29 ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ಆಗಸ್ಟ್ 30 ರಂದು ನಡೆಸಲಾಗುವುದು ಹಾಗೂ ಸದ್ಯದಲ್ಲಿಯೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Leave a Reply

comments

Related Articles

error: