ಪ್ರಮುಖ ಸುದ್ದಿಮನರಂಜನೆ

ಚಿತ್ರ ನಿರ್ಮಾಪಕ ದೀಪಕ್‌ ಸಾಮಿದೊರೈ ಕೋವಿಡ್‌ ಸೋಂಕಿನಿಂದ ಸಾವು

ರಾಜ್ಯ(ಬೆಂಗಳೂರು)ಮೇ.13:-   ಕನ್ನಡ ಚಿತ್ರರಂಗದ ನಿರ್ಮಾಪಕ ದೀಪಕ್‌ ಸಾಮಿದೊರೈ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿತ್ತು. ಬುಧವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಚಿತ್ರದ ನಿರ್ಮಾಪಕರಾಗಿದ್ದರು ದೀಪಕ್.‌ ಅವರ ನಿಧನಕ್ಕೆ ಆನಂದ್ ಆಡಿಯೋ ಟ್ವೀಟರ್ ಮೂಲಕ ಸಂತಾಪ ಸೂಚಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: