ಕ್ರೀಡೆದೇಶಪ್ರಮುಖ ಸುದ್ದಿಮನರಂಜನೆ

ಟ್ವಿಟ್ಟರ್ ನಲ್ಲಿ ರೆಮೆಡಿಸಿವಿರ್ ಇಂಜೆಕ್ಷನ್ ಕೇಳಿದ ಕ್ರಿಕೆಟಿಗ ಹರ್ಭಜನ್ ಸಿಂಗ್ : ಸಹಾಯಕ್ಕಾಗಿ ಮುಂದೆ ಬಂದ ಸೋನು ಸೂದ್

ದೇಶ(ನವದೆಹಲಿ)ಮೇ.13:- ಕೊರೋನಾ ಸೋಂಕಿನ ಪ್ರಕರಣಗಳ ವೇಗವು ದೇಶಾದ್ಯಂತ ನಿಧಾನವಾಗುತ್ತಿಲ್ಲ. ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರ ಮುಂದೆ ಅನೇಕ ಪ್ರಮುಖ ಸರಕುಗಳ ಕೊರತೆಯಿದೆ. ಇದರಲ್ಲಿ ಔಷಧಿಗಳನ್ನು ಸಹ  ಸೇರಿಸಲಾಗಿದೆ.   ಸಾಮಾನ್ಯ ಜನರೊಂದಿಗೆ ಸ್ಟಾರ್ಸ್ ಗಳು  ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರೊಂದಿಗೆ, ಅನೇಕ ತಾರೆಯರು ಸಹ ಸಹಾಯ ಹಸ್ತ ಚಾಚಿದ್ದಾರೆ. ಅವರಲ್ಲಿ  ಬಾಲಿವುಡ್ ತಾರೆ  ಸೋನು ಸೂದ್ ಕೂಡ ಒಬ್ಬರು.

ಬಾಲಿವುಡ್ ನಟ ಸೋನು ಸೂದ್ ಜನರಿಗೆ ಸಹಾಯ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಟ್ವಿಟರ್‌ನಲ್ಲಿ ಸಹಾಯ ಕೋರಿದ್ದರು. ಅವರು ಕರ್ನಾಟಕದ ರೋಗಿಯೋರ್ವನಿಗಾಗಿ ಈ ಸಹಾಯವನ್ನು ಕೇಳಿದ್ದರು. ಹರ್ಭಜನ್ ಸಿಂಗ್ ಈ ಬಗ್ಗೆ ಟ್ವೀಟ್ ಮಾಡಿದ್ದು,   ರೋಗಿಯ ಸ್ಥಿತಿ ಗಂಭೀರವಾಗಿದೆ , ಅವರಿಗೆ ರೆಮೆಡೆಸಿವಿರ್ ಚುಚ್ಚುಮದ್ದಿನ ಅಗತ್ಯವಿರುತ್ತದೆ ಎಂದು ಬರೆದಿದ್ದರು ‘1 ರೆಮೆಡೆಸಿವಿರ್ ಇಂಜೆಕ್ಷನ್ ಅಗತ್ಯವಿದೆ. ಆಸ್ಪತ್ರೆಯ ಹೆಸರು ಬಸಪ್ಪ. ಇದು ಕರ್ನಾಟಕದಲ್ಲಿದೆ ಎಂದಿದ್ದರು.

ಕೆಲವೇ ನಿಮಿಷಗಳಲ್ಲಿ, ಹರ್ಭಜನ್ ಸಿಂಗ್ ಅವರ ಈ ಟ್ವೀಟ್  ವೈರಲ್ ಆಗಲು ಪ್ರಾರಂಭಿಸಿತು, ನಂತರ ಅನೇಕರು ಇಂಜೆಕ್ಷನ್ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಇದರ ಅಲಭ್ಯತೆಗೆ ಅನೇಕ ಜನರು ಭಯಪಟ್ಟಿದ್ದರೂ, ಸೋನು ಸೂದ್ ಅವರು ಹೀರೋ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹರ್ಭಜನ್ ಸಿಂಗ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೋನು ಸೂದ್, ‘ಭಾಜಿ .. ತಲುಪಿಸಲಾಗುವುದು’ ಎಂದು ಬರೆದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: