ಕ್ರೀಡೆದೇಶಪ್ರಮುಖ ಸುದ್ದಿ

ಮಾಸ್ಟರ್ ಬ್ಲಾಸ್ಟರ್ ಗೆ ಜನ್ಮದಿನದ ಸಂಭ್ರಮ

ಕ್ರಿಕೆಟ್ ದಂತಕಥೆ, ಮಾಸ್ಟರ್ ಬ್ಲಾಸ್ಟರ್ , ಭಾರತ ರತ್ನ ಸಚಿನ್ ತೆಂಡೂಲ್ಕರ್​ ಅವರು ಇಂದು 44ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಸಚಿನ್ ಈ ಹೆಸರು ಕೇಳಿದರೇನೇ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನವಾಗುತ್ತದೆ.  ಕ್ರಿಕೆಟ್​ ದೇವರ ವ್ಯಕ್ತಿತ್ವವೇ ಅಂಥಹದ್ದು. ಈ ಕ್ರಿಕೆಟ್​ ದಿಗ್ಗಜನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್​​ನಿಂದ ಸಚಿನ್​​ ದೂರವಾದರೂ ಸಚಿನ್​ರನ್ನು ಕ್ರಿಕೆಟ್ ಬಿಟ್ಟಿಲ್ಲ.  44ನೇ ವಸಂತಕ್ಕೆ ಕಾಲಿಟ್ಟಿರೋ ಮಾಸ್ಟರ್​ ಬ್ಲಾಸ್ಟರ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಕ್ರಿಕೆಟಿಗರು ಸಚಿನ್​ಗೆ ಶುಭ ಕೋರಿದ್ದಾರೆ. ಅಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಕ್ರಿಕೆಟ್​ ದೇವರಿಗೆ ಶುಭ ಕೋರಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: