ಪ್ರಮುಖ ಸುದ್ದಿಮನರಂಜನೆ

ಕೋರೋನಾದಿಂದ ಚೇತರಿಸಿಕೊಂಡ 12ದಿನಗಳ ಬಳಿಕ ನಟ ಮುಖೇಶ್ ಖನ್ನಾ ಸಹೋದರಿ  ಕಮಲ್ ಕಪೂರ್  ನಿಧನ

ದೇಶ(ಮುಂಬೈ),ಮೇ.13:-  ಖ್ಯಾತ ನಟ ಮುಖೇಶ್ ಖನ್ನಾ ಅವರ ಅಕ್ಕ ಕಮಲ್ ಕಪೂರ್ ನಿಧನ ಹೊಂದಿದ್ದಾರೆ. ಅವರು ಇತ್ತೀಚೆಗೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರು. ಮುಖೇಶ್ ಖನ್ನಾ ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ನೀಡಿದ್ದಾರೆ.

ಈ ಹಿಂದೆ ಮುಖೇಶ್ ಖನ್ನಾ ಅವರ  ಸಾವಿನ ಬಗ್ಗೆ ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು,  ಅವರ ಸಹೋದರಿಯ ಮರಣದ ನಂತರ ಮುಖೇಶ್ ಖನ್ನಾ ಅವರ ಕುಟುಂಬ ಶೋಕದ ಅಲೆಯಲ್ಲಿ ಮುಳುಗಿದೆ.  ದುಃಖದ ಈ ಸಮಯದಲ್ಲಿ ಮುಖೇಶ್ ಅವರ ಅಭಿಮಾನಿಗಳು ಅವರೊಂದಿಗೆ ನಿಂತಿದ್ದಾರೆ.

ಮಾಹಿತಿ ನೀಡಿದ ಮುಖೇಶ್ ಖನ್ನಾ   ‘ನಿನ್ನೆ ನನ್ನ ಸಾವಿನ ಸುಳ್ಳು ಸುದ್ದಿಯ ಕುರಿತು ಸತ್ಯವನ್ನು ಹೇಳಲು ನಾನು ಹೆಣಗಾಡಿದೆ, ಆದರೆ ಒಂದು ಭಯಾನಕ ಸತ್ಯ ನನ್ನ ಬಳಿ ಸುಳಿದಾಡುತ್ತಿದೆ ಎಂಬುದು ನನಗೆ ತಿಳಿದಿರಲಿಲ್ಲ. ಇಂದು ನನ್ನ ಅಕ್ಕ ಕಮಲ್ ಕಪೂರ್ ದೆಹಲಿಯಲ್ಲಿ ನಿಧನರಾದರು. ಅವರ ಸಾವಿನಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು 12 ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರು. ಮೇಲಿರುವವನ ಲೆಕ್ಕಾಚಾರ ಏನೆಂಬುದು ನನಗೆ ತಿಳಿದಿರಲಿಲ್ಲ.   ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: