ಕರ್ನಾಟಕಪ್ರಮುಖ ಸುದ್ದಿ

ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯದಲ್ಲಿ ಡಾ.ರಾಜ್ ಜೀವನ ಚರಿತ್ರೆ ಅಳವಡಿಕೆ : ಡಾ.ಜಿ.ಪರಮೇಶ್ವರ್

ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ಕುಮಾರ್ ಅವರ 88ನೇ ಜನ್ಮದಿನದ ಪ್ರಯುಕ್ತ ಗೃಹಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರವ ಡಾ.ರಾಜ್ ಕುಮಾರ್ ಸಮಾಧಿಗೆ ತೆರಳಿ ಗೌರವ ಸಮರ್ಪಿಸಿದರು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಾ.ರಾಜ್ ನಾಡು ಕಂಡ ಅಪರೂಪದ ವ್ಯಕ್ತಿ. ಅವರ ಕುರಿತು ಮುಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಯುವಪೀಳಿಗೆಗೆ ಅವರ ಪರಿಚಯ ಮಾಡಿಕೊಡಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಡಾ.ರಾಜ್ ಕುಮಾರ್ ಜೀವನಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು. (ಎಸ್.ಎನ್-ಎಸ್.ಎಚ್))

Leave a Reply

comments

Related Articles

error: