ದೇಶಪ್ರಮುಖ ಸುದ್ದಿ

ಮೇ 30ರಂದು ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ : ಎರಡ್ಮೂರು ದಿನದಲ್ಲಿ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ದೇಶ(ನವದೆಹಲಿ)ಮೇ.14:- ನೈರುತ್ಯ ಮುಂಗಾರು ಪ್ರಸಕ್ತ ವರ್ಷ ಮೇ 30ರಂದು ಕೇರಳಕ್ಕೆ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ, ಸ್ಕೈಮೆಟ್‍ ವರದಿ ಮಾಡಿದೆ.
ಈ ವರ್ಷ ನೈರುತ್ಯ ಮುಂಗಾರು ಕೇರಳದ ಮೇಲೆ ಮೇ 30ರಂದು ಎರಡು ದಿನ ಬೀಸಲಿದೆ. ಮುಂಗಾರು ಅವಧಿಯಲ್ಲಿ ಸರಾಸರಿ ಶೇ. 103ರಷ್ಟು ಮಳೆಯಾಗಲಿದೆ ಎಂದು ಸ್ಕೈಮೆಟ್‍ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್‍ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ವರೆಗೆ ಸರಾಸರಿ ಮಳೆಯಾಗುವುದನ್ನು ಆಧರಿಸಿ ಮುನ್ಸೂಚನೆ ನೀಡಲಾಗುತ್ತದೆ. ಸಾಮಾನ್ಯವಾಗಿ ನೈರುತ್ಯ ಮುಂಗಾರು ಭಾರತಕ್ಕೆ ಜೂನ್‍ ಒಂದರಂದು ಅಪ್ಪಳಿಸಲಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ಏರುಪೇರುಗಳಿಂದಾಗಿ ಕೇರಳದಲ್ಲಿ ಮುಂಗಾರು ಆಗಮನದ ಮೇಲೆ ಪ್ರಭಾವ ಬೀರುತ್ತದೆ.
ಕೊರೋನಾ ಸೋಂಕಿನ ಎರಡನೆ ಅಲೆಯ ಜೊತೆಗೆ, ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮುಂದಿನ ಎರಡು, ಮೂರು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಭಾರತೀಯ ಹವಾಮಾನ ಇಲಾಖೆ, ಅರಬ್ಬೀ ಸಮುದ್ರದಲ್ಲಿ ಎದ್ದಿರುವಂತ ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ, ಮುಂದಿನ ಎರಡು ಮೂರು ದಿನಗಳು ಕೇರಳ, ಲಕ್ಷದ್ವೀಪ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.

ಈ ಮಳೆಗೆ ಅರಬ್ಬೀ ಸಮುದ್ರದಲ್ಲಿ ಏದ್ದಿರುವ ತೌಕ್ತೆ ಚಂಡಮಾರುತದ ಪರಿಣಾವಾಗಿ, ಮಳೆ ಸುರಿಯಲಿದೆ. ಹೀಗಾಗಿಯೇ ಮಂಗಳೂರಿನಲ್ಲಿ ಕರಾವಳಿ ಕಾವಲುಪಡೆ ಇಂದಿನಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಕೊಟ್ಟಿದೆ.

Leave a Reply

comments

Related Articles

error: