ದೇಶಪ್ರಮುಖ ಸುದ್ದಿ

ಮಣಿಪುರ ಬಿಜೆಪಿ ಅಧ್ಯಕ್ಷ ಎಸ್.ಕೆ. ಟಿಕೇಂದ್ರ ಸಿಂಗ್ ಕೊರೋನಾದಿಂದ ನಿಧನ

ದೇಶ(ನವದೆಹಲಿ),ಮೇ.14:-ದೇಶದಲ್ಲಿ ಅನಿಯಂತ್ರಿತ ವೇಗದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದೆ. ಅದರ ಕಪಿಮುಷ್ಠಿಯಲ್ಲಿ ರಾಜಕೀಯ ನೇತಾರರೂ ಸಿಲುಕಿ ಸಾಯುತ್ತಿದ್ದಾರೆ. ಕೋವಿಡ್ -19 ಕಾರಣ, ಮಣಿಪುರದ ಬಿಜೆಪಿ ಅಧ್ಯಕ್ಷ ಪ್ರೊಫೆಸರ್ ಎಸ್. ಟಿಕೇಂದ್ರ ಸಿಂಗ್ ನಿಧನರಾದರು. ಸುದ್ದಿ ಸಂಸ್ಥೆಯೊಂದರ ಮಾಹಿತಿಯ ಪ್ರಕಾರ ಎಸ್.ಟಿಕೇಂದ್ರ ಸಿಂಗ್ ಅವರು ಇಂಫಾಲ್‌ನ ಶಿಜಾ ಆಸ್ಪತ್ರೆಯಲ್ಲಿ ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ ಮಣಿಪುರದಲ್ಲಿಯೂ ಕೊರೋನಾದ ಹೊಸ ಪ್ರಕರಣಗಳಲ್ಲಿ ನಿರಂತರ ಹೆಚ್ಚಳವಿದೆ. ಒಂದು ದಿನ ಮುಂಚಿತವಾಗಿ ಬುಧವಾರ ಮಣಿಪುರದಲ್ಲಿ 666 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದರೆ, 17 ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಆದಾಗ್ಯೂ ಈ ಅವಧಿಯಲ್ಲಿ 358 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮಣಿಪುರದಲ್ಲಿ ಬುಧವಾರ 5 ಸಾವಿರ 2,72 ಸಕ್ರಿಯ ಕೊರೋನಾ ಪ್ರಕರಣಗಳಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: