ಮೈಸೂರು

ಕಾಳಸಂತೆಯಲ್ಲಿ Remdesivir ಔಷಧ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ : ಎರಡು Remdesivir ಇಂಜೆಕ್ಷನ್‍ಗಳು ವಶ 

ಮೈಸೂರು,ಮೇ.13:- ಸಿ.ಸಿ.ಬಿ.ಪೊಲೀಸರು ಕಾಳಸಂತೆಯಲ್ಲಿ Remdesivir ಔಷಧ ಮಾರಾಟ ಮಾಡುತ್ತಿದ್ದ ಇಬ್ಬರ ನ್ನು ಬಂಧಿಸಿ: ಎರಡು Remdesivir ಇಂಜೆಕ್ಷನ್‍ಗಳು ವಶ ಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಕೋವಿಡ್-19 ಸೋಂಕಿತರಿಗೆ ನೀಡುವ ಜೀವ ರಕ್ಷಕ ಔಷಧಿಯಾದ Remdesivir ಇಂಜೆಕ್ಷನ್‍ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಿ.ಸಿ.ಬಿ. ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ  12-05-2021 ರಂದು ರಾತ್ರಿ ಸಿಸಿಬಿ ಪೊಲೀಸ್‍ ರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.
ಡೇವಿಡ್ ಇನೋಸ್ ಬಿನ್ ರಾಬರ್ಟ್, (24 ), ಸ್ಟಾಪ್ ನರ್ಸ್ ಕೆಲಸ, #4903, 1 ನೇ ಮೇನ್, ಚರ್ಚ್ ಹತ್ತಿರ, ಎಫ್.ಟಿ.ಎಸ್ ಸರ್ಕಲ್ ಹತ್ತಿರ, ಮೈಸೂರು.
ಅಜಯ್ ಬಿನ್ ಶಂಕರೇಗೌಡ, (22), ಸ್ಟಾಫ್ ನರ್ಸ್, ಅಗಸನಹುಂಡಿ ಕಾಲೋನಿ, ಮೇಟಿಕೊಪ್ಪೆ ಪೋಸ್ಟ್, ಕಸಬಾ ಹೋಬಳಿ, ಹೆಚ್.ಡಿ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ. ಮೇಲ್ಕಂಡ ಆರೋಪಿಗಳನ್ನು ವಿಚಾರಣೆ ಮಾಡಲಾಗಿ ಇವರುಗಳು ಮೈಸೂರು ನಗರದ ಗೋಕುಲಂ 1ನೇ ಹಂತ, ಕೆ.ಆರ್.ಎಸ್. ರಸ್ತೆಯಲ್ಲಿರುವ ಚಂದ್ರೋದಯ ಐ ಜನರಲ್ ಆಸ್ಪತ್ರೆ (ಸಿ.ಇ.ಜಿ.) ಯ ನೌಕರರಾಗಿದ್ದು, ಸದರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ನೀಡಲು ವಿತರಿಸಿದ್ದ Remdesivir ಇಂಜೆಕ್ಷನ್‍ಗಳನ್ನು
ಅಕ್ರಮ ಲಾಭ ಗಳಿಸುವ ದುರುದ್ದೇಶದಿಂದ ಕಾಳಸಂತೆಯಲ್ಲಿ ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿಗಳಿಂದ 2 Remdesivir ಇಂಜೆಕ್ಷನ್‍ ಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ರವರುಗಳಾದ ಡಾ.ಎ.ಎನ್.ಪ್ರಕಾಶ್‍ಗೌಡ,  ಎಂ.ಎಸ್.ಗೀತಪ್ರಸನ್ನ   ಮಾರ್ಗದರ್ಶನದಲ್ಲಿ, ಸಿ.ಸಿ.ಬಿ.ಯ ಎ.ಸಿ.ಪಿ.   ಸಿ.ಕೆ.ಅಶ್ವತ್ಥನಾರಾಯಣರವರ ನೇತೃತ್ವದಲ್ಲಿ, ಸಿ.ಸಿ.ಬಿ ಪೊಲೀಸ್ ಇನ್ಸ ಪೆಕ್ಟರ್ ಆರ್.ಜಗದೀಶ್, ಹಾಗೂ ಸಿಬ್ಬಂದಿಗಳು ನಡೆಸಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ,   ಪ್ರಶಂಸಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: