ದೇಶಪ್ರಮುಖ ಸುದ್ದಿ

ಜಾಂಟಿ ರೋಡ್ಸ್ ಪುತ್ರಿ ‘ಇಂಡಿಯಾ’ಗೆ ಪ್ರಧಾನಿ ಮೋದಿ ಜನ್ಮದಿನ ಶುಭಾಶಯ

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಜಾಂಟಿ ರೋಡ್ಸ್ ಪುತ್ರಿ ‘ಇಂಡಿಯಾ’ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಏಪ್ರಿಲ್ 23 ರಂದು ಜಾಂಟಿ ರೋಡ್ಸ್ ಅವರ ಪುತ್ರಿ ‘ಇಂಡಿಯಾ’ ಜನ್ಮ ದಿನ. ಇದರ ಬೆನ್ನಲ್ಲೇ ಟ್ವಿಟರ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶುಭಾಶಯ ಕೋರಿದ್ದು, ಇಂಡಿಯಾದಿಂದ ಇಂಡಿಯಾಗೆ ಜನ್ಮ ದಿನದ ಶುಭಾಶಯ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಅವರ ಈ ಟ್ವೀಟ್ ಲಕ್ಷಾಂತರ ಮಂದಿ ರೀ ಟ್ವೀಟ್ ಮಾಡಿದ್ದು, ಇಂಡಿಯಾಗೆ ಶುಭ ಕೋರಿದ್ದಾರೆ.

ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಜಾಂಟಿ ರೋಡ್ಸ್’ಗೆ ಭಾರತ ಮತ್ತು ಭಾರತೀಯ ಸಂಸ್ಕೃತಿ ಎಂದರೆ ಎಲ್ಲಿಲ್ಲದ ಪ್ರೀತಿ. ಕ್ರಿಕೆಟ್’ನಿಂದ ನಿವೃತ್ತಿಯಾದ ಬಳಿಕ ಭಾರತದ ನಂಟು ತೊರೆಯದ ಜಾಂಟಿ ಹಲವು ಬಾರಿ ಭಾರತಕ್ಕೆ ಬಂದಿದ್ದಾರೆ.

ಭಾರತದ ಮೇಲಿನ ಪ್ರೀತಿಯಿಂದಾಗಿಯೇ ತಮ್ಮ ಪುತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ.

Leave a Reply

comments

Related Articles

error: