ಮೈಸೂರು

ಮೈಸೂರಿಗೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್ : ಇಬ್ಬರಲ್ಲಿ ಸೋಂಕು ದೃಢ

ಮೈಸೂರು,ಮೇ.14:- ಮಹಾರಾಷ್ಟ್ರ, ಉತ್ತರ ಭಾರತದ ಕಡೆ  ಕಾಣಿಸಿಕೊಂಡ ಮಾರಣಾಂತಿಕ ರೋಗ ಬ್ಲ್ಯಾಕ್ ಫಂಗಸ್ ಸಾಂಸ್ಕೃತಿಕ ನಗರಿ‌ ಮೈಸೂರಿಗೂ‌ ದಾಂಗುಡಿ ಇಟ್ಟಿದೆ.

ಮೈಸೂರಿನ ಆಸ್ಪತ್ರೆಯಲ್ಲಿ ಇಬ್ಬರಿಗೆ ಬ್ಲ್ಯಾಕ್ ಫಂಗಸ್ ಬಂದಿರುವುದು ದೃಢಪಟ್ಟಿದೆ. ಸದ್ಯ ಮಾರಣಾಂತಿಕವಾದ ‌ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಕಳೆದ 15 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರಿಗೆ ಬ್ಲ್ಯಾಕ್ ಫಂಗಸ್ ರೋಗ ಬಂದಿದೆ. ಈಗಾಗಲೇ ಕೊರೊನಾದಿಂದ ತತ್ತರಿಸಿರುವ ಜನರಿಗೆ ಬ್ಲ್ಯಾಕ್ ಫಂಗಸ್ ನಿಂದ ಮತ್ತೊಂದು ‌ಶಾಕ್ ಎದುರಾಗಿದೆ. ಮತ್ತಷ್ಟು ಜನರಿಗೆ ‌ಈ‌‌ ರೋಗ ಬಂದರೆ ಏನು ಮಾಡುವುದು ಎಂಬ ಚಿಂತೆ ಎದುರಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: