ದೇಶಪ್ರಮುಖ ಸುದ್ದಿ

ಬಲೂಚಿಸ್ತಾನವನ್ನು ಭಾರತ ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕು : ಸುಬ್ರಹ್ಮಣ್ಯನ್ ಸ್ವಾಮಿ

ವಡೋದರಾ : ಬಲೂಚಿಸ್ತಾನವನ್ನು ಭಾರತ ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಹೇಳಿದ್ದಾರೆ.

ಅಕೋತಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಕುಲ್’ಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿದ್ದೇ ಆದರೆ, ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಬೇಕು. ಗಡಿ ನಿಯಂತ್ರಣ ರೇಖೆಗಳನ್ನು ದಾಟಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದಿಂದ ಬಲೂಚಿಸ್ತಾನ, ಪಖ್ತುನಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯಗಳನ್ನು ಬೇರ್ಪಡಿಸಿ ಭಾರತ ಪಾಠ ಕಲಿಸಬೇಕೆಂದು ಎಂದಿದ್ದಾರೆ.

ಪಾಕಿಸ್ತಾನದ ಬೆದರಿಕೆಗಳಿಗೆ ಭಾರತ ತಲೆಕೆಡಿಸಿಕೊಳ್ಳಬಾರದು. ಚೀನಾದೊಂದಿಗೆ ಸಂಬಂಧ ಗಟ್ಟಿಗೊಳಿಸಲು ಪ್ರಧಾನಿ ಮೋದಿಯವರು ಪ್ರಯತ್ನ ಮಾಡುತ್ತಿದ್ದಾರೆ. ಚೀನಾ ಪ್ರದೇಶದ ಮೂಲಕ ಕಾಶ್ಮೀರ ಪ್ರವೇಶಿಸಿ ಭಯೋತ್ಪಾದನೆ ವಿರುದ್ಧ ಹೋರಾಡಲು ಪ್ರಧಾನಿ ಮೋದಿಯವರು ಚೀನಾದ ಬಳಿ ಮನವಿ ಮಾಡಿದ್ದಾರೆಂದು ತಿಳಿಸಿದ್ದಾರೆ.  ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕದ ಸಹಾಯ ಪಡೆಯಬೇಕು ಎಂದರು.

ಖಾಲಿಸ್ತಾನಿಗಳನ್ನು ಭಾರತ ಈ ಹಿಂದೆ ಹಿಮ್ಮೆಟ್ಟಿಸಿತ್ತು. ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನೂ ಶೀಘ್ರದಲ್ಲಿಯೇ ಹಿಮ್ಮೆಟ್ಟಿಸಲಿದೆ. ಭಾರತ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಲ್ಲುತೂರಾಟ ನಿಂತಿದೆ ಎಂದು ಹೇಳಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: