ಮೈಸೂರು

ಡಾ.ರಾಜ್ ಅಭಿಮಾನಿಗಳಿಂದ ಅವರ ಪುತ್ಥಳಿಗೆ ಮಾಲಾರ್ಪಣೆ : ಸಿಹಿಹಂಚಿ ಸಂಭ್ರಮ ಆಚರಣೆ

ನಟಸಾರ್ವಭೌಮ ಡಾ.ರಾಜ್ ಕುಮಾರ್ ರವರ 88ನೇ ಜಯಂತಿಯನ್ನು ಮೈಸೂರಿನ ಹೋಟೆಲ್ ಮಾಲೀಕರ ಸಂಘ ಹಾಗೂ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಶಿವಸೈನ್ಯ ಸಂಘದ ವತಿಯಿಂದ ಅರಮನೆ ಎದುರು ಇರುವ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿರುವ ಡಾ.ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ ಡಾ.ರಾಜ್ ಕುಮಾರ್ ಅವರ ನಟನೆ ಹಾಗೂ ಅವರ ಮಾತೃಭಾಷೆಯ ಪ್ರೀತಿ ಮತ್ತು ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದು ಡಾ.ರಾಜ್ ಒಬ್ಬರೇ. ಇದು ನಮ್ಮ ಕನ್ನಡಿಗರ ನಾಡಿಗಳಲ್ಲಿಯೂ ಈಗಲೂ ಮೀಡಿಯುತ್ತಿದೆ. ಡಾ.ರಾಜ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಮೈಸೂರುಪಾಕು, ಲಾಡು, ಸೋನ್ಪಾಪಡಿ, ಜಿಲೇಬಿ,ಜಾಂಗೀರ್, ಬಾದುಷ, ಬಾದಾಮ್ ಪುರಿ  ಸೇರಿದಂತೆ ಸುಮಾರು ಹತ್ತುಸಾವಿರ ಸಿಹಿಯನ್ನು ಹಚ್ಚಲಾಗುತ್ತಿದೆ ಎಂದರು.
ಇನ್ನೂ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಶಿವಸೈನ್ಯ ಸಂಘದ ವತಿಯಿಂದ ಅಭಿಮಾನಿಗಳಿಗೆ 5೦೦ ಏಳನೀರು, ಟಮೋಟ ಬಾತ್ ಹಾಗೂ ಕೇಸರಿ ಬಾತ್ ಗಳನ್ನು ಸುಮಾರು ಒಂದು ಸಾವಿರ ಮಂದಿಗೆ ಹಂಚಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ರವಿ ತಿಳಿಸಿದರು. ಡಾ.ರಾಜ್ ಹುಟ್ಟುಹಬ್ಬದ ಪ್ರಯುಕ್ತ ಡೋಲುಕುಣಿತ , ನಾದಸ್ವರ ಮತ್ತು ವೀರಗಾಸೆ ನೃತ್ಯಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಯರ್ ಎಂ ಜೆ ರವಿಕುಮಾರ್, ಶಾಸಕ ವಾಸು,  ಪಾಲಿಕೆ ಸದಸ್ಯೆ ರಾಜಲಕ್ಷ್ಮಿ ಶಿವಣ್ಣ, ಮಾಜಿ ಪಾಲಿಕೆ ಸದಸ್ಯ ಎಂ. ಕೆ. ಅಶೋಕ್, ಶಿವಣ್ಣ,  ಭಾಷ್ಯಂ ಸ್ವಾಮೀಜಿ  ಸೇರಿದಂತೆ ಇತರ ಕನ್ನಡ ಸಂಘಟನೆಗಳ ಸುಮಾರು 500ಮಂದಿಗೂ ಅಧಿಕ  ಅಭಿಮಾನಿಗಳು ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: