ಮನರಂಜನೆ

ಹೇಮಮಾಲಿನಿ, ಐಶ್ವರ್ಯ ರೈ, ಸೂಜಿತ್ ಹಾಗೂ ಜೀನತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಭಾರತೀಯ ಸಿನಿಮಾ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಜನಪ್ರಿಯ ನಟರನ್ನು ಗುರುತಿಸಿ ಭಾರತ ಸರ್ಕಾರವು ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.

ಅಂತೆಯೇ ಈ ಬಾರಿ ಜನಪ್ರಿಯ ನಟಿಯರಾದ ಹೇಮಮಾಲಿನಿ ಮತ್ತು ಐಶ್ವರ್ಯ ರೈ ಬಚ್ಚನ್, ಹಾಗೂ  ನಿರ್ದೇಶಕರಾದ ಸೂಜಿತ್ ಸರ್ಕಾರ್ ಮತ್ತು ಜೀನತ್ ಅಮನ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈನಲ್ಲಿ ನಡೆದ 2017 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀನತ್ ಅಮನ್ ಅವರಿಗೆ ಜೀವಮಾನ ಸಾಧನೆ ನೀಡಿ ಗೌರವಿಸಲಾಗಿದೆ. ಸೂಜಿತ್ ಸರ್ಕಾರ್ ಅವರಿಗೆ ‘ಪಿಂಕ್’ ಸಿನಿಮಾ ನಿರ್ದೇಶನಕ್ಕಾಗಿ ಸೃಜನಶೀಲ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ. ‘ಕಾಬಿಲ್’ ಸಿನಿಮಾದ ಪಾತ್ರಕ್ಕೆ ರೋಹಿತ್ ರಾಯ್ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.(ಎಲ್.ಜಿ)

Leave a Reply

comments

Related Articles

error: