ಮೈಸೂರು

ಬನ್ನೂರು ರಿಂಗ್ ರಸ್ತೆಯಲ್ಲಿ ಸರಣಿ ಅಪಘಾತ :ಎರಡು ದ್ವಿಚಕ್ರವಾಹನಗಳ ಸವಾರರ ಮೇಲೆ ಹರಿದ ಬಸ್ : ಸವಾರರು ಸಾವು

ದ್ವಿಚಕ್ರ ವಾಹನದಲ್ಲಿ ಕುಳಿತು ಮಾತನಾಡುತ್ತಿದ್ದ ನಿಂತಿದ್ದ ಇಬ್ಬರು ವಾಹನಸವಾರರ ಮೇಲೆ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹರಿದಿದ್ದು ಸವಾರರಿಬ್ಬರೂ ಸಾವನ್ನಪ್ಪಿದ ಘಟನೆ ಮೈಸೂರಿನ ಬನ್ನೂರು ರಿಂಗ್ ರಸ್ತೆಯಲ್ಲಿ ನಡೆದಿದೆ.

ಮೈಸೂರು ಬನ್ನೂರು ರಿಂಗ್ ರಸ್ತೆಯ  ಬದಿಯಲ್ಲಿ  ಅದರೆ ವಿಟಿಯು ಕಾಲೇಜ್ ಬಳಿ  ಸಿಡಿ100 ಹಾಗೂ ಶೈನ್ ಗಾಡಿಯಲ್ಲಿ ಇಬ್ಬರು ಪರಿಚಯಸ್ಥರು ಮಾತನಾಡುತ್ತ ಕುಳಿತಿದ್ದರು. ಇದೇ ವೇಳೆ ರಾಜೀವ ನಗರದಿಂದ ಸಾತಗಳ್ಳಿ ಕಡೆಗೆ ಲಾರಿಯೊಂದು ಚಲಿಸುತ್ತಿತ್ತು. ಇದೇ ವೇಳೆ ಸಾತಗಳ್ಳಿ ಕಡೆಯಿಂದ ಕೊಲಂಬಿಯಾ ಏಷ್ಯಾ ಕಡೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಬರುತ್ತಿತ್ತು. ಬಸ್ಸು ಚಾಲಕ ಲಾರಿಗೆ ಎಲ್ಲಿ ಗುದ್ದಿ ಬಿಡುತ್ತೇನೋ ಎನ್ನುವ ಧಾವಂತದಲ್ಲಿ ಬಸ್ಸನ್ನು ಎಡಕ್ಕೆ ತಿರುಗಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಬಸ್ ಲಾರಿಗೆ ಗುದ್ದಿದೆ. ಬಳಿಕ ಪೆಟ್ಟಿಗೆ ಅಂಗಡಿ ಹಾಗೂ ವಿದ್ಯುತ್  ಕಂಬಕ್ಕೆ ಗುದ್ದಿದ ಬಸ್ ದ್ವಿಚಕ್ರವಾಹನಗಳೆರಡರಲ್ಲಿ ಪರಸ್ಪರ ಮಾತನಾಡುತ್ತ ನಿಂತಿದ್ದ ಸವಾರರ ಮೇಲೆ ನುಗ್ಗಿದೆ.  ಬಸ್ ಹರಿದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿಯ ಮುಂಭಾಗ ಜಖಂಗೊಂಡಿದೆ. ವಿದ್ಯುತ್ ಕಂಬ ಮುರಿದಿದೆ.  ಸ್ಥಳಕ್ಕೆ ಸಿದ್ದಾರ್ಥನಗರ ಸಂಚಾರಿ ಠಾಣೆಯ ಎಸಿಪಿ ಮಾದಯ್ಯ, ಇನ್ಸಪೆಕ್ಟರ್ ಹರೀಶ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತರ ವಿವರಗಳು ಲಭ್ಯವಾಗಿಲ್ಲ. ಇನ್ನಷ್ಟೇ ತಿಳಿದುಬರಬೇಕಿದೆ.

ಸಿದ್ದಾರ್ಥ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: