ಕರ್ನಾಟಕಪ್ರಮುಖ ಸುದ್ದಿ

ಸರ್ಕಾರದ ಬೇಜಾವಾಬ್ದಾರಿಯಿಂದ ಲಸಿಕೆಯ ಕೊರತೆ: ಸಿದ್ದರಾಮಯ್ಯ

ಬೆಂಗಳೂರು,ಮೇ 17-ಸರ್ಕಾರದ ಬೇಜವಾಬ್ದಾರಿತನದಿಂದ ಕೊರೊನಾ ಲಸಿಕೆಯ ಕೊರತೆ ಉಂಟಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾಋಎ.

ಹೊಸಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿಂದಲಾದರೂ ಲಸಿಕೆ ತಂದು ಜನರಿಗೆ ಕೊಡಿ, ಸದ್ಯದ ಪರಿಸ್ಥಿತಿಯಲ್ಲಿ ಅದೊಂದೇ ಪರಿಹಾರ. 18 ರಿಂದ 44 ವರ್ಷದವರಿಗೆ ಲಸಿಕೆ ಕೊಡುವುದನ್ನು ನಿಲ್ಲಿಸಿದ್ದಾರೆ. ವಯೋಮಾನದವರಿಗೆ ಇನ್ನೂ 2 ತಿಂಗಳವರೆಗೆ ಲಸಿಕೆ ಸಿಗಲ್ಲ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಲಸಿಕೆ ಹಾಕುವುದೇ ಪರಿಹಾರ. ಲಸಿಕೆ ಹಾಕಿದರೆ ಶೇ.80ರಷ್ಟು ಸೋಂಕನ್ನು ತಡೆಗಟ್ಟಲು ಸಾಧ್ಯ. ರಾಜ್ಯ ಸರ್ಕಾರ ಎಲ್ಲಿಂದಲಾದರೂ ಲಸಿಕೆ ತರಿಸಿ ಜನರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಬೇಜಾವಾಬ್ದಾರಿಯಿಂದ ಲಸಿಕೆ ಕೊರತೆ ಉಂಟಾಗಿದೆ. ಪ್ರಚಾರಕ್ಕಾಗಿ ನಮ್ಮ ಲಸಿಕೆಯನ್ನು ಹೊರದೇಶಕ್ಕೆ ಕಳುಹಿಸಿದರು. ಈಗ ಕೊರತೆ ಉಂಟಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಮಾತ್ರ ಕೊಡುತ್ತಿದ್ದಾರೆ. ಅಭಿಯಾನದ ಮಾದರಿಯಲ್ಲಿ ಲಸಿಕೆ ಕೊಡಬೇಕು. ಅದೊಂದೆ ಪರಿಹಾರ ಎಂದರು.

ಎರಡನೇ ಬಾರಿ ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಹಾಕಿಕೊಳ್ಳದೆ ತಿರುಗಾಡಿ, ಜನರ ನಡುವೆ ಇರಿ ಎಂದು ಅಮೆರಿಕಾದಲ್ಲಿ ಅಧ್ಯಕ್ಷರು ಹೇಳುತ್ತಿದ್ದಾರೆ. ಲಸಿಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರೋಗ ತಡೆಗಟ್ಟಲು ಸಾಧ್ಯವಿದೆ. ರಾಜ್ಯ ಸರ್ಕಾರ ಲಸಿಕೆ ಕೊಡಿಸಲು ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಹೇಳಿದರು. (ಎಂ.ಎನ್)

Leave a Reply

comments

Related Articles

error: