ಮೈಸೂರು

ಶ್ರೀ ವಾಸುದೇವ್ ಮಹರಾಜ ಪೌಂಢೇಶನ್-ಹಿಮಾಲಯ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಶಂಕರರ ಜಯಂತಿ ಆಚರಣೆ

ಮೈಸೂರು,ಮೇ.18:- ಶ್ರೀ ವಾಸುದೇವ್ ಮಹರಾಜ ಪೌಂಢೇಶನ್ ಮತ್ತು ಹಿಮಾಲಯ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ    ಇಂದು ವಿದ್ಯಾರಣ್ಯಪುರಂ ಅವಧೂತ ವಾಸುದೇವ ಮಹರಾಜ ಕುಟೀರದಲ್ಲಿ ಆದಿ ಶ್ರೀ ಜಗದ್ಗುರು ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು‌.

ಸಾಂಕೇತಿಕವಾಗಿ ಆಚರಿಸಲಾದ ಈ ಕಾರ್ಯಕ್ರಮ ದಲ್ಲಿ ಶ್ರೀ ಶಂಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ.ಕೆ ರಘುರಾಮ ವಾಜಪೇಯಿ   ಶ್ರೀ ಶಂಕರಾಚಾರ್ಯರು ಜಡ್ಡುಗಟ್ಟಿದ ಸನಾತನ ಧರ್ಮಕ್ಕೆ ಹೊಸ ಹೊಳಪು ಪ್ರಕಾಶ ನೀಡಿ ಚಿಂಥನ ಮಂಥನಕ್ಕೆ ಆಸ್ಪದ ಒದಗಿಸಿ ನಿಜವಾದ ಸನಾತನ ಧರ್ಮ ತತ್ವಮೀಮಾಂಸೆ ವಾಙ್ಮಯದ ಹಿರಿಮೆಯನ್ನು ಮೆರೆಸಿದರು ಎಂದು ಹೇಳಿದರು.   ಕ್ರಾಂಗೇಸ್ ಯುವ ಮುಖಂಡ   ಎಂ.ಎನ್ ನವೀನ್ ಕುಮಾರ್ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯರು ತಮ್ಮ ಕಾಲ್ನಡಿಗೆಯಲ್ಲಿಯೇ ಭಾರತಾದ್ಯಂತ ಸಂಚರಿಸಿ ಸನಾತನ ಧರ್ಮವನ್ನು ಜಾಗೃತಿಗೊಳಿಸಿದರು. ಶ್ರೀ ಶಂಕರಾಚಾರ್ಯರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಎಂ.ಎನ್ ದೊರೆಸ್ವಾಮಿ ಹಿಮಾಲಯ ಫೌಂಡೇಶನ್ ಅನಂತ್ ಕಾರ್ಯದರ್ಶಿ ಹರ್ಷ ವರ್ಧನ,ನಾಗೇಂದ್ರ ಬಾಬು ಹಾಗೂ  ಮಹೇಶ ನಾಯಕ್ ಅವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: