ಮೈಸೂರು

ಜನಪರ-ಜನಪ್ರಿಯ ಬಜೆಟ್ ಪ್ರಚಾರಾಂದೋಲನಕ್ಕೆ ಚಾಲನೆ

ರಾಜ್ಯ ಸರ್ಕಾರದ 2017-18ನೇ ಸಾಲಿನ ಬಜೆಟ್ ಜನಪರ ಹಾಗೂ ಜನಪ್ರಿಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಕುರಿತು ಮಾಹಿತಿ ನೀಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಪ್ರಚಾರಾಂದೋಲನ ಸ್ತಬ್ಧ‌ಚಿತ್ರಕ್ಕೆ ಸಂಸದರಾದ ಆರ್. ಧ್ರುವನಾರಾಯಣ್ ಹಾಗೂ ಪ್ರತಾಪ್ ಸಿಂಹ ಅವರು ಸೋಮವಾರ ಚಾಲನೆ ನೀಡಿದರು.

ಪ್ರಚಾರಾಂದೋಲನ ಮೇ.18 ರ ವರೆಗೆ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲಿದೆ. ಪ್ರಚಾರಾಂದೋಲನದ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಿರುವ “ಜನಪರ ಬಜೆಟ್ 2017” ಮಾಧ್ಯಮ ನೋಟ ಪುಸ್ತಕ ಹಾಗೂ “ಐದನೇ ವರ್ಷದೆಡೆಗೆ ಭರವಸೆಯ ನಡಿಗೆ” ಎಂಬ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರ ರಾಜು ಆರ್. ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ರಂದೀಪ್ ಡಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್ ಅವರು ಉಪಸ್ಥಿತರಿದ್ದರು.

ಟಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಏಪ್ರಿಲ್ 24- ಮೆಲ್ಲಹಳ್ಳಿ, ಹಿಟ್ವುಳ್ಳಿ, ಏಪ್ರಿಲ್ 25- ಹೆಗ್ಗೂರು, ಕಲಿಯೂರು, ಏಪ್ರಿಲ್-26 ಕೊತ್ತೇಗಾಲ, ಕೊಳತ್ತೂರು, ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಏಪ್ರಿಲ್ 27-ತಗಡೂರು, ದೇವನೂರು, ಏಪ್ರಿಲ್ 28- ಹೆಡೆತಲೆ, ದೊಡ್ಡಕೌಲಂದೆ, ಮೇ 2- ಸಿಂದುವಳ್ಳಿ, ಹೆಡಿಯಾಲ, ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೇ 3- ಕೊತ್ತೇಗಾಲ, ಸರಗೂರು, ಮೇ 4- ತುಂಬುಸೋಗೆ, ಹೊಸಹೊಳಲು, ಮೇ 5- ಡಿ.ಬಿ.ಕುಪ್ಪೆ, ಬಳ್ಳೆಹಾಡಿ, ಮೇ 6- ನಾಗನಹಳ್ಳಿ, ಹಾರನಹಳ್ಳಿ,ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೇ 7- ಉಮ್ಮತ್ತೂರು, ಕಲ್ಲುಣಿಕೆ, ಮೇ 8-ಕಟ್ಟೆಮಳಲವಾಡಿ, ಬಿಳಿಗೆರೆ, ಮೇ 9- ಕರ್ಣಕುಪ್ಪೆ, ಕಡೇಮನುಗನಹಳ್ಳಿ, ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೇ 10- ಕಿರ್‍ನಲ್ಲಿ, ತಾತನಹಳ್ಳಿ, ಮೇ 11-ಹಿಟ್ನೇಬಾಗಿಲು, ರಾವಂದೂರು, ಮೇ 12-ಹಂಡಿತವಳ್ಳಿ, ಬೆಟ್ಟದಪುರ, ಕೆ.ಆರ್.ನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೇ 15- ಹನ್‍ಸೋಗೆ, ಮಾಯಿಗೊಂಡನಹಳ್ಳಿ, ಮೇ 16- ಅರ್ಜುನಹಳ್ಳಿ, ಹೊಸ ಅಗ್ರಹಾರ, ಮೇ 17- ಭೇರ್ಯ, ಮುಂಜುನಹಳ್ಳಿ ಹಾಗೂ ಮೇ 18- ಮನುಗನಹಳ್ಳಿ, ಇಲವಾಲ ಗ್ರಾಮದಲ್ಲಿ ಪ್ರಚಾರಾಂದೋಲ ವಾಹನತೆರಳಲಿದೆ. ಪ್ರಚಾರಾಂದೋಲನ ಸಂದರ್ಭದಲ್ಲಿ ಸರ್ಕಾರದ ಸಾಧನೆಯ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. (ಎಸ್.ಎಚ್)

Leave a Reply

comments

Related Articles

error: