ಕ್ರೀಡೆದೇಶಪ್ರಮುಖ ಸುದ್ದಿ

ಲಸಿಕೆ ಹಾಕಿಸಿಕೊಂಡು ಪೇಚಿಗೆ ಸಿಲುಕಿದ ಕ್ರಿಕೆಟಿಗ ಕುಲದೀಪ್ ಯಾದವ್: ತನಿಖೆಗೆ ಆದೇಶ

ಕಾನ್ಪುರ,(ಉತ್ತರ ಪ್ರದೇಶ),ಮೇ 19-ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ಟೀಂ ಇಂಡಿಯಾದ ಬೌಲರ್ ಕುಲದೀಪ್ ಯಾದವ್ ಇದೀಗ ಪೇಚಿಗೆ ಸಿಲುಕಿದ್ದಾರೆ.

ತಾವು ಲಸಿಕೆಯ ಪಡೆದುಕೊಳ್ಳುತ್ತಿರುವ ಫೋಟೋವನ್ನು ಟ್ವಿಟ್ವರ್ ನಲ್ಲಿ ಪೋಸ್ಟ್ ಮಾಡಿ, ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ನೀವೂ ಸಹ ಲಸಿಕೆ ಪಡೆಯಿರಿ. ಲಸಿಕೆ ಲಭ್ಯವಾದ ತಕ್ಷಣ ಲಸಿಕೆ ಹಾಕಿಕೊಳ್ಳಿ. ಕೊರೊನಾ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ. ಕಳೆದ ಶನಿವಾರ ಕ್ರಿಕೆಟಿಗ ಕುಲದೀಪ್ ಯಾದವ್ ಅವರು, ಕೋವಿಡ್ ಲಸಿಕೆ ಪಡೆದಿದ್ದರು.

ಕುಲದೀಪ್ ಯಾದವ್ ಅವರು ಲಸಿಕೆ ಪಡೆದುಕೊಂಡಿರುವ ಜಾಗದಿಂದಾಗಿ ಪೇಚಿಗೆ ಸಿಲುಕಿದ್ದಾರೆ. ಏಕೆಂದರೆ ಕುಲದೀಪ್ ಲಸಿಕೆ ಪಡೆಯಲು ಆಸ್ಪತ್ರೆಗೆ ಹೋಗಿಲ್ಲ. ಬದಲಿಗೆ ಬೇರೆಡೆ ಲಸಿಕೆ ಪಡೆದಿರುವುದು ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹುಲ್ಲು ಹಾಸಿರುವ ಜಾಗದಲ್ಲಿ ಅವರು ಲಸಿಕೆ ಪಡೆದಿದ್ದಾರೆ.

ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾನ್ಪುರ ಮ್ಯಾಜಿಸ್ಟ್ರೇಟ್‌ ಅಲೋಕ್‌ ತಿವಾರಿ ತನಿಖೆಗೆ ಆದೇಶಿಸಿದ್ದಾರೆ. ಈ ರೀತಿ ಮನೆಯಲ್ಲಿಯೇ ಲಸಿಕೆ ಹಾಕಿಸಿಕೊಳ್ಳುವುದು ನಿಯಮ ಬಾಹಿರ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಕಾನ್ಪುರ ಜಿಲ್ಲಾಡಳಿತ ಸಹ ತನಿಖೆಗೆ ಆದೇಶಿಸಿದೆ. ಕ್ರಿಕೆಟಿಗ ಕುಲದೀಪ್ ಯಾದವ್ ಅವರಿಗೆ ಸ್ಲಾಟ್ ಕಾಯ್ದಿರಿಸಿದ ಆಸ್ಪತ್ರೆಯಲ್ಲಿ ಲಸಿಕೆ ನೀಡದೆ ಅತಿಥಿ ಗೃಹದಲ್ಲಿ ಲಸಿಕೆ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: