ಮೈಸೂರು

ಸಾಲಗಳ ಮರುಪಾವತಿ ಸಮಯದಲ್ಲಿ ಬಡ್ಡಿರಹಿತವಾಗಿ ಮರುಪಾವತಿ ಮಾಡಿಸುವಂತೆ ಮನವಿ

ಮೈಸೂರು,ಮೇ.20:-  ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಲಾಕ್ಡೌನ್ ಸಂತ್ರಸ್ತರಿಗೆ  1250 ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಬಡವರಿಗೆ ತುಂಬಾ ಅನುಕೂಲಕರವಾಗಿ ಮಾಡಿಕೊಟ್ಟಿರುವುದನ್ನು   ಬಿಜೆಪಿ ಮೈಸೂರು ನಗರ (ಜಿಲ್ಲಾ) ಯುವಮೋರ್ಚಾ ಉಪಾಧ್ಯಕ್ಷ ಕಾರ್ತೀಕ ಮರಿಯಪ್ಪ ಸ್ವಾಗತಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಕೊರೋನಾದ ಸಂದಿಗ್ಧ ಸಮಯ ದಲ್ಲಿ ಸಾಲ ಮರುಪಾವತಿ ಅವಧಿ 3 ತಿಂಗಳು ವಿಸ್ತರಣೆಯೂ ಅತ್ಯಂತ ಮಹತ್ವವಾದದ್ದು. ದಯವಿಟ್ಟು ಮೂರು ತಿಂಗಳ ನಂತರ ಸಾಲಗಳ ಮರುಪಾವತಿ ಸಮಯದಲ್ಲಿ ಬಡ್ಡಿರಹಿತವಾಗಿ ಮರುಪಾವತಿ ಮಾಡಿಸಬೇಕೆಂದು ವಿನಂತಿಸಿದ್ದಾರೆ.

ಕೊರೋನಾ ಮೊದಲನೇ ಅಲೆಯಲ್ಲಿ ಸಾಲಗಳ ಮರುಪಾವತಿ ವಿಸ್ತರಣೆಯಾಗಿತ್ತು. ಸಾಲ ಮರುಪಾವತಿ ಸಮಯದಲ್ಲಿ ಬಡ್ಡಿ ಸಹಿತವಾಗಿ ಜನರ ಹತ್ತಿರ ಸಂಘ, ಸ್ಮಾಲ್ ಫೈನಾನ್ಸ್ ಗಳು  ತೆಗೆದುಕೊಂಡಿದ್ದಾರೆ. ಬಡವರಿಗೆ, ಜನಸಾಮಾನ್ಯರಿಗೆ ಈ ಒಂದು ವಿಷಯದಲ್ಲಿ ತುಂಬಾ ತೊಂದರೆಯಾಗಿದೆ. ದಯವಿಟ್ಟು   ಮುಖ್ಯಮಂತ್ರಿಗಳು ಹಾಗೂ ಸಹಕಾರಿ ಸಚಿವರಾದ ಎಸ್. ಟಿ ಸೋಮಶೇಖರ್ ಅವರಿಗೆ ಕೇಳಿಕೊಳ್ಳುವುದೇನಂದರೆ  ಸಾಲಗಳ ಮರುಪಾವತಿ ಸಮಯದಲ್ಲಿ ಬಡ್ಡಿ ರಹಿತವಾಗಿ ಮರುಪಾವತಿ ಮಾಡಿಸಿಕೊಳ್ಳಬೇಕೆಂದು ಸಂಘ , ಸಂಸ್ಥೆ ಗಳಿಗೆ ಸ್ಮಾಲ್ ಫೈನಾನ್ಸ್ ಗಳಿಗೆ  ಹಣಕಾಸು ವಿಭಾಗಕ್ಕೆ ತಿಳಿಸಿ ಎಂದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: