ಮೈಸೂರು

ಮೂಕಪ್ರಾಣಿ- ಪಕ್ಷಿಗಳ ಸಂರಕ್ಷಣೆ ಮನುಷ್ಯರ ಕರ್ತವ್ಯ : ಹೇಮಂತ್ ಕುಮಾರ್ ಗೌಡ

ಮೈಸೂರು,ಮೇ.20:- ಕೊರೋನಾ ಸೋಂಕು ತಡೆಗಟ್ಟಲು ಇಡೀ ರಾಷ್ಟ್ರವೇ ಲಾಕ್  ಡೌನ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪ್ರಾಣಿಪಕ್ಷಿಗಳನ್ನು ರಕ್ಷಿಸುವುದು ಸಹ ನಮ್ಮ ಕರ್ತವ್ಯ ಎಂದು  ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ತಿಳಿಸಿದರು.

ಮೂಕಪ್ರಾಣಿಗಳನ್ನು ರಕ್ಷಿಸುವಲ್ಲಿ ನಿರಂತರವಾಗಿ ಕಳೆದ 13 ದಿನಗಳಿಂದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾರಾಜ ಮೈದಾನ, ಚಾಮುಂಡಿಬೆಟ್ಟ ತಪ್ಪಲು ಹಾಗೂ ಮೈಸೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ತೆರಳಿ ಪ್ರಾಣಿಗಳಿಗೆ ಹಾಲು ,ಅನ್ನ , ಮೊಟ್ಟೆ , ಬಿಸ್ಕೆಟ್, ಬ್ರೆಡ್ ಹಾಗೂ  ಇನ್ನಿತರ ವಸ್ತುಗಳನ್ನು ನೀಡುತ್ತಿದೆ.   ಲಾಕ್ ಡೌನ್ ಮುಗಿಯುವವರೆಗೂ ಈ ಕಾರ್ಯ ಮುಂದುವರಿಯಲಿದೆ. ಇಂದು ವಸ್ತುಪ್ರದರ್ಶನ ಆವರಣದಲ್ಲಿರುವ ಇರುವಂತಹ  ಬೀದಿ ನಾಯಿಗಳಿಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಅವರು  ಆಹಾರ ವಿತರಿಸಿದರು. ಬಳಿಕ ಮಾತನಾಡಿದ ಅವರು ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾ ಸೊಂಕು ತಡೆಗಟ್ಟಲು ನಾವು ಮನೆಯಲ್ಲೆ ಸುರಕ್ಷಿತವಾಗಿದ್ದೇವೆ. ಆದರೆ  ನಾಗರಿಕತೆಯೊಂದಿಗೆ ಜೀವಿಸುವ ಪ್ರಾಣಿಪಕ್ಷಿಗಳನ್ನು ಕಾಪಾಡುವುದು ನಮ್ಮೆಲರ ಕರ್ತವ್ಯ, ಹಾಗಾಗಿ ಇಂದು ವಸ್ತುಪ್ರದರ್ಶನ ಖಾಲಿ ಮೈದಾನದಲ್ಲಿ ಬೀದಿನಾಯಿಗಳಿಗೆ ಹಾಲು ಅನ್ನ, ಹಾಗೂ ಬನ್, ಮತ್ತು ಕೋತಿಗಳಿಗೆ ಬಾಳೆ ಹಣ್ಣು ನೀಡಲಾಗುತ್ತಿದೆ. ಕಳೆದ 13 ದಿನಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವ ಟ್ರಸ್ಟ್ ನ  ಕಾರ್ಯ ನಿಜಕ್ಕೂ ಶ್ಲಾಘನೀಯ. ಪ್ರತಿಯೊಬ್ಬರೂ ನಮ್ಮ‌ಮನೆಗಳ ಸುತ್ತಮುತ್ತಲೂ ವಾಸಿಸುವ ಬೀದಿಪ್ರಾಣಿಗಳಿಗೆ ಒಂದು ಹೊತ್ತಾದರೂ ಊಟ ಕೊಡೋಣ, ಹಾಗೂ ಮನೆಯ ಮೇಲೆ ಬಟ್ಟಲಿನಲ್ಲಿ ಕುಡಿಯಲು ನೀರು ಇಟ್ಟರೇ ಸಣ್ಣಪುಟ್ಟ ಪಕ್ಷಿಗಳಿಗೆ ಉಪಯೋಗವಾಗುತ್ತದೆ, ಪರಿಸರ ಕಾಳಜಿಯೊಂದಿಗೆ ಮೂಕಪ್ರಾಣಿ ಪಕ್ಷಿಗಳ ಸಂರಕ್ಷಣೆ ಮನುಷ್ಯರ ಕರ್ತವ್ಯವಾಗಿರುತ್ತದೆ ಎಂದರು.

ದೇಶ ಲಾಕ್ ಡೌನ್   ಆಗಿರುವುದರಿಂದ ಬೀದಿ ಬದಿ ಪ್ರಾಣಿಗಳಿಗೆ ಏನಾದರೂ ತೊಂದರೆ ಅಥವಾ ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ 9880752727 ಈ ನಂಬರ್ ಗೆ ಕರೆ ಮಾಡಬಹುದು ಎಂದು ಟ್ರಸ್ಟ್ ನ ಅಧ್ಯಕ್ಷರು ತಿಳಿಸಿದರು.

ಈ ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ನವೀನ್ ಕುಮಾರ್ ,ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷರಾದ  ಜೋಗಿ ಮಂಜು  ,ವಿಕ್ರಮ ಅಯ್ಯಂಗಾರ್ ,  ಹರೀಶ್ ನಾಯ್ಡು,ಚೇತನ್ ಕಾಂತರಾಜು   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: