ಕ್ರೀಡೆದೇಶಪ್ರಮುಖ ಸುದ್ದಿ

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಗೆ ಪಿತೃ ವಿಯೋಗ

ದೇಶ(ಮೀರತ್),ಮೇ.21:- ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಅವರು ಮೀರತ್ ನಿವಾಸದಲ್ಲಿ ನಿಧನರಾದರು.
ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ಗೆ ಕೀಮೋಥೆರಪಿಗೆ ಒಳಗಾಗಿದ್ದರು. ಪಿತ್ತಜನಕಾಂಗದ ಕಾಯಿಲೆಗಳನ್ನೂ ಹೊಂದಿದ್ದ ಅವರ ಆರೋಗ್ಯ ಸ್ಥಿತಿ ಎರಡು ವಾರಗಳಿಂದ ತೀರಾ ಗಂಭೀರವಾಗಿತ್ತು. ಉತ್ತರ ಪ್ರದೇಶದ ಮಾಜಿ ಪೊಲೀಸ್ ಉದ್ಯೋಗಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸಿಂಗ್ ಸ್ವಯಂಪ್ರೇರಿತವಾಗಿ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. ಕಳೆದ ವರ್ಷದ ಐಪಿಎಲ್‌ಗಾಗಿ ಭುವನೇಶ್ವರ್ ಯುಎಇಯಲ್ಲಿ ಆಡುತ್ತಿದ್ದಾಗ ಸೆಪ್ಟೆಂಬರ್ 2020 ರಲ್ಲಿ ಅವರಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ಯುಕೆ ಯಲ್ಲಿ ವೈದ್ಯರನ್ನು ಸಂಪರ್ಕಿಸಿದ ನಂತರ ಸಿಂಗ್ ನವದೆಹಲಿಯ ಆಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ವಾರದ ಹಿಂದೆ ಆವರ ಆರೋಗ್ಯ ಹದಗೆಟ್ಟಿತ್ತು, ನಂತರ ಅವರನ್ನು ಮೀರತ್‌ನ ಗಂಗಾ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ದಿನಗಳ ನಂತರ ಕಿರಣ್ ಪಾಲ್ ಸಿಂಗ್ ಕೊನೆಯುಸಿರೆಳೆದಿದ್ದಾರೆ.

ಅವರು ಪತ್ನಿ ಇಂದ್ರೇಶ್ ದೇವಿ ಮತ್ತು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪ್ರಸ್ತುತ ಭುವನೇಶ್ವರ್ ಅವರನ್ನು ಮನೆಯಲ್ಲಿಯೇ ಇದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: