ಮೈಸೂರು

ರೈತ ಪರ ಹೋರಾಟಗಾರ,ವಕೀಲ ಹಳೆ ಮಿರ್ಲೆ ಸುನಯ್ ಗೌಡ ಕೊರೊನಾಕ್ಕೆ ಬಲಿ

ಮೈಸೂರು, ಮೇ.20:-  ರೈತರ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಕಷ್ಟು ಹೋರಾಟ ನಡೆಸಿ ರೈತಪರ ಹೋರಾಟಗಾರರಾಗಿ ಗುರುತಿಸಿ ಕೊಂಡಿದ್ದ ‌ ಕೆ.ಆರ್.ನಗರ ತಾಲೂಕಿನ‌ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮತ್ತು ವಕೀಲ ಹಳೆಮಿರ್ಲೆ ಸುನಯ್ ಗೌಡ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ .

ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ಕಳೆದ 15 ದಿನದ ಹಿಂದೆ ಕೊವಿಡ್ ಸೊಂಕಿಗೆ ತುತ್ತಾಗಿ ಕೆ.ಆರ್.ನಗರ ಕೊವೀಡ್ ಆಸ್ವತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಕ್ಕೆ ದಾಖಲಿಸಲಾಗಿತ್ತು.
ಅದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಮೃತರು  ಪತ್ನಿ ಸಾಲಿಗ್ರಾಮ ಗ್ರಾ.ಪಂ.ಲೆಕ್ಕ ಸಹಾಯಕಿ ಅಶ್ವಿನಿ ಮತ್ತು ಇಬ್ಬರು ಪುತ್ರರ ನ್ನು ಅಗಲಿದ್ದಾರೆ.

Leave a Reply

comments

Related Articles

error: