ಮೈಸೂರು

ಉತ್ತಮ ನಾಗರಿಕನಾಗಲು ಶಿಕ್ಷಣ ಅತ್ಯುತ್ತಮ ಮಾಧ್ಯಮ : ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಮತ

ಉತ್ತಮ ನಾಗರಿಕನಾಗಲು ಶಿಕ್ಷಣ ಅತ್ಯುತ್ತಮ ಮಾಧ್ಯಮ. ಶಿಕ್ಷಣವಿಲ್ಲದೇ ನಾಗರಿಕನಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಸೋಮವಾರ ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಮಹಾರಾಜ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನಾಗರಿಕರಾಗಿದ್ದ ಮನುಷ್ಯರನ್ನು ನಾಗರಿಕರನ್ನಾಗಿಸಿದ್ದೇ ಶಿಕ್ಷಣ. ಶಿಕ್ಷಣದಿಂದ ಬೌದ್ಧಿಕ ಮಟ್ಟ ಹೆಚ್ಚುವುದಲ್ಲದೆ ಜೀವನವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಇಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಯಸುತ್ತಾರೆ. ಮಹಾರಾಜ ಕಾಲೇಜು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು ಇಲ್ಲಿ ಕುವೆಂಪು, ತೀ.ನಂ. ಶ್ರೀಕಂಠಯ್ಯ, ಶಿವರುದ್ರಪ್ಪ, ಚಿದಾನಂದಮೂರ್ತಿ, ಅನಂತಮೂರ್ತಿ ಸೇರಿದಂತೆ ನೂರಾರು ಮಹನೀಯರ ಹೆಜ್ಜೆ ಗುರುತುಗಳಿವೆ. ಅವರು ಬಿಟ್ಟು ಹೋಗಿರುವ ಆದರ್ಶಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಡಾ.ಸುಭಾಷ್ ಭರಣಿ, ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಪಿ.ಸುನೀತ, ಆಡಳಿತಾಧಿಕಾರಿ ಡಾ.ಲಿಂಬ್ಯಾನಾಯಕ್, ಮಹಾರಾಜ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಕಾರ್ಯಾಧ್ಯಕ್ಷ ಪ್ರೊ.ಆರ್.ಎನ್.ಪದ್ಮನಾಭ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: