ಕರ್ನಾಟಕಪ್ರಮುಖ ಸುದ್ದಿ

ಸಾಲೂರು ಬೃ ಹನ್ ಮಠದ ಹಿರಿಯ ಶ್ರೀಗಳ ಸ್ಥಿತಿ ಗಂಭೀರ

ರಾಜ್ಯ(  ಚಾಮರಾಜನಗರ),ಮೇ.21: ‌‌‌‌‌- ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ‌ ಗುರುಸ್ವಾಮಿಗಳ‌ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದು,ಕ್ಷೀಣಿಸುತ್ತಿದೆ.

ಕಳೆದ ಎರಡು ವಾರದ ಹಿಂದೆ ಕೋವಿಡ್ ಪಾಸಿಟಿವ್ ಆಗಿದ್ದು, ಗುರುವಾರ ಮತ್ತೆ ಪರೀಕ್ಷಿಸಲಾಗಿ ಪಾಸಿಟಿವ್ ಬಂದಿದೆ. ಹಾಲಿ ಮೈಸೂರಿನ ರಿಂಗ್ ರಸ್ತೆ ಆಲನಹಳ್ಳಿಯ ಸಾಲೂರು ಮಠದ ಶಾಖಾ ಮಠದಲ್ಲಿದ್ದಾರೆ.

ಆಕ್ಸಿಜನ್ ಸ್ಯಾಚುರೇಷನ್ ಬುಧವಾರ 50-60ರ ಆಸುಪಾಸುನಲ್ಲಿದ್ದು, ಹೊಸ ಆಕ್ಸಿಜನ್ ಕಾನ್ಸೆಂಟ್ರೇಟರ್ ತರಿಸಿ ಹಾಕಿಸಲಾಗಿದೆ. ಈಗ‌ ಸ್ವಲ್ಪ ಸುಧಾರಿಸಿದ್ದರೂ ಪರಿಸ್ಥಿತಿ ಉತ್ತಮವಾಗಿಲ್ಲ.

ಅವರಿಗೆ ಹೃದಯ ಸಂಬಂಧಿ ಖಾಯಿಲೆ, ಕಿಡ್ನಿ ಸಮಸ್ಯೆ ಮತ್ತು ವಿಪರೀತ ಡಯಾಬಿಟಿಸ್‌ ಇರುವುದರಿಂದ ತಹಬದಿಗೆ ಬರುತ್ತಿಲ್ಲ.‌ ಹಾಗಾಗಿ ಆಸ್ಪತ್ರೆಯಿಂದ ಮೈಸೂರಿನ ಶಾಖಾಮಠಕ್ಕೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: