ಮೈಸೂರು

ತುಳಸಿದಾಸ್ ಆಸ್ಪತ್ರೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಭೇಟಿ : ಪರಿಶೀಲನೆ

ಮೈಸೂರು, ಮೇ.21:-  ಮೈಸೂರಿನ ಕೋವಿಡ್ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲು ಮೈಸೂರಿನ ತುಳಸಿದಾಸ್ ಆಸ್ಪತ್ರೆಗೆ ಡಿಸಿಎಂ   ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಅಗತ್ಯವಿರುವ ಸಲಕರಣೆಗಳು, ಔಷಧಿಗಳು ಹಾಗೂ ವೆಂಟಿಲೇಟರ್ ಗಳನ್ನು ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರು ಹಾಗೂ ಮೈಸೂರು ಕೋವಿಡ್ ರೋಗಿಗಳ ಶವ ಸಂಸ್ಕಾರದ ಉಸ್ತುವಾರಿಗಳೂ ಆದ ಎಂ ಅಪ್ಪಣ್ಣನವರು  ಉಪಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಅವರು, ಕಾವೇರಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಚಂದ್ರಶೇಖರ್, ಡಾ ಭಾರ್ಗವ್, ಮೂಡಾ ಕಮಿಷನರ್ ನಟೇಶ್, ಮೂಡಾ ಕಾರ್ಯನಿರ್ವಹಣಾಧಿಕಾರಿಗಳಾದ ಸವಿತಾ ಅವರು, ವೈದ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: