ಸುದ್ದಿ ಸಂಕ್ಷಿಪ್ತ

ಉದ್ಯಮಿಗಳ ಕುಂದು ಕೊರತೆ ವಿಚಾರ ವಿನಿಮಯ ಕಾರ್ಯಕ್ರಮ : ಏ.25 ರಂದು

ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿದಾರರ ಸಂಘ  ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ , ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಉದ್ಯಮಿಗಳೊಂದಿಗೆ ಕುಂದು ಕೊರತೆ ವಿಚಾರ ವಿನಿಮಯ ಕಾರ್ಯಕ್ರಮವನ್ನು ಏ.25ರ ಬೆಳಿಗ್ಗೆ 10.30ಕ್ಕೆ ಸಯ್ಯಾಜಿರಾವ್  ರಸ್ತೆಯಲ್ಲಿರುವ ಸಿ.ಟಿ.ಐ ಕಟ್ಟಡದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ  ಹಮ್ಮಿಕೊಳ್ಳಲಾಗಿದೆ.
ನಗರಪಾಲಿಕೆ ಸದಸ್ಯ ಪುರುಷೋತ್ತಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್.ರಾಮಕೃಷ್ಣೇಗೌಡ, ದೇವರಾಜು ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: