ಮೈಸೂರು

ಶಾಸಕ ನಾಗೇಂದ್ರ ಅಭಿಮಾನಿ ಬಳಗದಿಂದ ಉಚಿತ ಆ್ಯಂಬುಲೆನ್ಸ್ ಸೇವೆ

ಮೈಸೂರು,ಮೇ.21:-  ಚಾಮರಾಜ ಕ್ಷೇತ್ರದ ಸಾರ್ವಜನಿಕರಿಗೆ ಹಾಗೂ ನಗರದ ಬಡ ಕುಟುಂಬದ ಕೊರೋನ ಸೋಂಕು ತಗುಲಿದವರ ಸಹಾಯಕ್ಕಾಗಿ   ನಾಗೇಂದ್ರ ಅಭಿಮಾನಿಗಳ ಬಳಗ ಹಾಗೂ ಶ್ರೀ ಬಸವೇಶ್ವರ ಸ್ವೀಟ್ಸ್ ಮಾಲೀಕರಾದ   ನವೀನ್ ಅವರ ಸಹಯೋಗದಲ್ಲಿ ತುರ್ತು ಸಂದರ್ಭದಲ್ಲಿನ ಸೇವೆಗಾಗಿ ಉಚಿತವಾಗಿ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ಶ್ರೀ ಮಹಾವೀರ ಜೈನ್ ಉದ್ಯಮಿಯವರ ಮಗಳು ಕಳೆದ ವರ್ಷ ಕ್ಯಾನ್ಸರ್ ನಿಂದ ಮೃತರಾದ ಜ್ಞಾಪಕಾರ್ಥವಾಗಿ ಕೆ.ಎಸ್.ಆರ್. ಟಿ.ಸಿ ಸಂಸ್ಥೆಯ ಬಸ್ ಗೆ 8 ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಆಕ್ಸಿಜನ್ ಆನ್ ವೀಲ್ಸ್ ನ್ನು ಸಾರ್ವಜನಿಕರ ಸೇವೆಗೆ   ಶಾಸಕರು ಹಾಗೂ ಜಿಲ್ಲಾಧಿಕಾರಿ   ರೋಹಿಣಿ ಸಿಂಧೂರಿ ಅವರು ಚಾಲನೆ ನೀಡಿದರು.

ಈ ಸಮಯದಲ್ಲಿ   ನವೀನ್, ಚೌಡಪ್ಪ, ಮಹಾವೀರ ಜೈನ್, ಕೆ.ಎಸ್.ಆರ್. ಟಿ.ಸಿ ನಗರ ಡಿಸಿ ನಾಗರಾಜ್, ಚಾಮರಾಜ ಕ್ಷೇತ್ರದ ಭಾ. ಜ.ಪ. ಅಧ್ಯಕ್ಷರಾದ ಸೋಮಶೇಖರ ರಾಜು, ಚಿರು, ದಶರಥ ,ಯತೀಶ್ ಮುಂತಾದವರು ಹಾಜರಿದ್ದರು.

Leave a Reply

comments

Related Articles

error: